ಎಂಟಿಬಿ ನಾಗರಾಜ್ ಹೇಳಿಕೆಗೆ ತಿರುಗೇಟು: ರಾಜ್ಯದಲ್ಲಿ ಜನರಲ್ ಎಲೆಕ್ಷನ್ ಬಗ್ಗೆ ಭವಿಷ್ಯ ನುಡಿದ ಮಾಜಿ ಸಿಎಂ ಸಿದ್ದರಾಮಯ್ಯ…

ಮೈಸೂರು,ಸೆ,1,2019(www.justkannada.in):  ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ಜನರಲ್ ಎಲೆಕ್ಷನ್ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಭವಿಷ್ಯ ನುಡಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬೈ ಎಲೆಕ್ಷನ್ ಗೆ  ರೆಡಿ ಆಗಿದೀವಿ.. ಮಧ್ಯಂತರ ಚುನಾವಣೆಗೂ ತಯಾರಾಗಿ ಅಂತ ಕಾರ್ಯಕರ್ತರಿಗೆ ಹೇಳಿದೀನಿ.. ನಿನ್ನೆ ದಕ್ಷಿಣ ಕನ್ನಡಕ್ಕೆ ಹೋಗಿದ್ದೆ. ಆಗ ನಮ್ ಕಾರ್ಯಕರ್ತರಿಗೆ  ಡಿಸೆಂಬರ್ ಗೆ  ಜನರಲ್ ಎಲೆಕ್ಷನ್ ಬರಬಹುದು ರೆಡಿ  ಆಗಿ ಅಂತ  ಹೇಳಿದ್ದೀನಿ. ಯಾಕೆಂದ್ರೆ ಈ  ಸರ್ಕಾರ ನೋಡಿದ್ರೆ ಅಧಿಕಾರ ನಡೆಸ್ತಾರೆ ಅಂತ ಅನ್ನಿಸ್ತಿಲ್ಲ.. ಅದಕ್ಕೆ  ಡಿಸೆಂಬರ್ ಗೆ ಜನರಲ್ ಎಲೆಕ್ಷನ್ ಬರತ್ತೆ  ರೆಡಿ ಆಗಿ ಅಂತ  ನಮ್ಮ  ಕಾರ್ಯಕರ್ತರಿಗೆ  ಹೇಳಿದ್ದೀನಿ ಎಂದರು.

ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ…

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಪ್ರವಾಹ ನಿರ್ವಹಣೆಯಲ್ಲಿ ವಿಫಲವಾಗಿದೆ. ಹತ್ತು ಸಾವಿರ  ಸಾಕಾಗಲ್ಲ.  ಒಂದು ಲಕ್ಷ ರೂ ಪರಿಹಾರ  ಕೊಡ್ಬೇಕು ಎಂದು ಆಗ್ರಹಿಸಿದರು.

ಹಾಗೆಯೇ ಬಿಎಸ್ ವೈ ಸೇರಿ ಬಿಜೆಪಿ ನಾಯಕರು ಬರಿ ಭಾಷಣ ಮಾಡ್ತಾರೆ ಅಷ್ಟೇ. ಪ್ರವಾಹಕ್ಕೆ ಸಿಲುಕಿದ ಜನ ಮನೆ, ಬಟ್ಟೆ, ಆಸ್ತಿ ಎಲ್ಲವನ್ನು ಕಳೆದುಕೊಂಡಿದ್ದಾರೆ ಅವರಿಗೆ  ಹತ್ತು ಸಾವಿರ ಎಲ್ಲಿ  ಸಾಕಾಗತ್ತೆ . ರಾಜ್ಯ ಸರ್ಕಾರ  ಪರಿಹಾರ ನೀಡುವಲ್ಲಿ  ವಿಫಲವಾಗಿದೆ ಎಂದು ಕಿಡಿಕಾರಿದರು.

ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ  ಇನ್ನ ವಿಷ ಕುಡಿದೋರು ಬದುಕುತ್ತಾರಾ- ಮತ್ತೆ ಡೈಲಾಗ್ ರಿಪೀಟ್ ಮಾಡಿದ ಸಿದ್ದರಾಮಯ್ಯ..

ಸರ್ಕಾರ ಇನ್ನೂ ಟೆಕಾಫ್ ಆಗಿಲ್ಲ. ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ  ಇನ್ನ ವಿಷ ಕುಡಿದೋರು ಬದುಕುತ್ತಾರಾ. ರಾಜಕಾರಣದಲ್ಲಿ ಯಾರನ್ನ ನಂಬೋದು ಅನ್ನೊದೆ ಗೊತ್ತಾಗ್ತಿಲ್ಲ. ನಾನೇ ಟಿಕೆಟ್ ಕೊಟ್ಟವರು ಶಾಸಕರಾದ್ರು ನಂತ್ರ ನನ್ನ ವಿರುದ್ದ ನಿಲ್ತಾರೆ. ರಾಜಕೀಯದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಂಟಿಬಿ ನಾಗರಾಜ್ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ…

ನಾನು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಸಿದ್ದರಾಮಯ್ಯ ವಾಸ ಮಾಡ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.  ಎಂಟಿಬಿ ನಾಗರಾಜ್ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ  ಒಂದು ಸಾರಿ ನಾನು ಹೃದಯದಲ್ಲಿ ಇದ್ದಿನಿ ಅಂತಾನೆ. ಆ ಮೇಲೆ ನನ್ನೇ ಟೀಕೆ ಮಾಡ್ತಾನೆ. ನನ್ನ ಜೊತೆಯಲ್ಲೇ ಇದ್ದು ನನಗೆ ದ್ರೋಹ ಮಾಡಿದ್ರು. ಅವರ ನಾಟಕಗಳಿಗೆ ಜನರೇ ಉತ್ತರ ಕೊಡ್ತಾರೆ ಎಂದು ಹರಿಹಾಯ್ದರು.

ಡಿಕೆಶಿ ಪರ ಧ್ವನಿ ಎತ್ತಿದ ಮಾಜಿ ಸಿಎಂ ಸಿದ್ದರಾಮಯ್ಯ …

ಮಾಜಿ ಸಚಿವ ಡಿಕೆ ಶಿವ ಕುಮಾರ್ ಗೆ ಇಡಿ ಡ್ರಿಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ದ್ವೇಷದ  ರಾಜಕಾರಣ ಮಾಡ್ತಿದೆ. ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡ್ತಿದೆ. ಕಾನೂನು ಅಂದ್ರೆ ಎಲ್ಲರಿಗೂ ಒಂದೆ ಅಲ್ವಾ. ಸದನದಲ್ಲಿ ಅಪರೇಷನ್ ಕಮಲದ ಬಗ್ಗೆ ಶಾಸಕರೇ ಪ್ರಸ್ತಾಪ ಮಾಡಿದ್ರು. ಅವರ ವಿರುದ್ದ ಯಾಕೆ ತನಿಖೆ ಮಾಡ್ತಿಲ್ಲ ಎಂದು ಪ್ರಶ್ನಿಸಿದರು.

Key words:   former CM -Siddaramaiah – predicted – general election – state.