Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಸಿಎಂ ಬೊಮ್ಮಾಯಿ ಸರ್ಕಾದ ಬಗ್ಗೆ ಭವಿಷ್ಯ ನುಡಿದ ಮಾಜಿ ಸಿಎಂ ಸಿದ್ಧರಾಮಯ್ಯ.

ಸಿಎಂ ಬೊಮ್ಮಾಯಿ ಸರ್ಕಾದ ಬಗ್ಗೆ ಭವಿಷ್ಯ ನುಡಿದ ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಆಗಸ್ಟ್,16,2021(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ. ಇದ್ದರೇ ಒಂದು ವರ್ಷ ಅಧಿಕಾರದಲ್ಲಿರಬಹುದೇನೋ ಅಷ್ಟೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಾವೇನು ಈ ಸರ್ಕಾರವನ್ನ ತೆಗೆಯಲ್ಲ. ಅವರಾಗೇ ಬಿದ್ದರೇ ನಾವೇನು ಮಾಡೋಕೆ ಆಗುವುದಲ್ಲ. ಬಿಜೆಪಿಯಲ್ಲಿ ಅಸಮಾಧಾನವಿದೆ. ಹೀಗಾಗಿ ಹೆಚ್ಚು ದಿನ ಸರ್ಕಾರ ಉಳಿಯಲ್ಲ ಎಂದರು.

ಶಾಲೆ ಆರಂಭ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಸರ್ಕಾರ ಆತುರದಲ್ಲಿ ಶಾಲೆಗಳನ್ನ ಆರಂಭ  ಮಾಡುವುದು ಬೇಡ.ಕೊರೋನಾ ಪಾಸಿಟಿವಿಟಿ ರೇಟ್  1ಕ್ಕಿಂತ ಕಡಿಮೆ ಇದ್ದರೇ ಶಾಲೆಗಳನ್ನ ಆರಂಭಿಸಿ. ಇಲ್ಲದಿದ್ದರೇ ಶಾಲೆ ಆರಂಭಿಸುವುದು ಬೇಡ ಎಂದು ಸಲಹೆ ನೀಡಿದರು.

Key words: Former CM- Siddaramaiah – predicted -CM Bommai – Government