Friday, September 18, 2026

BDA Apartments

ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೋಲಾರ ಟಿಕೆಟ್ ಮಿಸ್: ಭುಗಿಲೆದ್ದ ಮುಸ್ಲಿಂ ಮುಖಂ...
Home Front Page ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೋಲಾರ ಟಿಕೆಟ್ ಮಿಸ್: ಭುಗಿಲೆದ್ದ ಮುಸ್ಲಿಂ ಮುಖಂಡರ ಆಕ್ರೋಶ.

ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೋಲಾರ ಟಿಕೆಟ್ ಮಿಸ್: ಭುಗಿಲೆದ್ದ ಮುಸ್ಲಿಂ ಮುಖಂಡರ ಆಕ್ರೋಶ.

ಕೋಲಾರ,ಏಪ್ರಿಲ್,15,2023(www.justkannada.in):  ಕಾಂಗ್ರೆಸ್​ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು  ಇಂದು ಬಿಡುಗಡೆ ಮಾಡಿದ್ದು, ಕೋಲಾರದಿಂದ ಮಾಜಿ ಸಿಎಂ ಸಿದ‍್ಧರಾಮಯ್ಯಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮುಸ್ಲೀಂ ಮುಖಂಡರ ಆಕ್ರೋಶ ಭುಗಿಲೆದ್ದಿದೆ.

ಕೋಲಾರ ಕ್ಷೇತ್ರ ಟಿಕೆಟ್ ಅನ್ನು ಸಿದ್ದರಾಮಯ್ಯ ನೀಡದೆ ಕೊತ್ತನೂರು ಮಂಜುನಾಥ್ ಗೆ ನೀಡಿದ್ದಕ್ಕೆ   ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರ ಹೊರವಲಯದ ವಡಗೂರು ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎದುರೇ ಮುಸ್ಲಿಂ ಮುಖಂಡರು ಅಸಮಾಧಾನ ತೋಡಿಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಟಿಕೆಟ್​ ನೀಡದಿದ್ದರೆ ಮುಸ್ಲಿಮರಿಗೆ ನೀಡುವಂತೆ ಒತ್ತಾಯಿಸಿದ್ದಾರೆ. ಡಿಕೆ ಶಿವಕುಮಾರ್ ಮನವೊಲಿಸಲು ಯತ್ನಿಸಿದ್ದು, ಮಾತು ಕೇಳದೆ ಮನೆಯಿಂದ ಮುಸ್ಲಿಂ ಮುಖಂಡರು ಹೊರ ನಡೆದಿದ್ದಾರೆ.ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೋಲಾರ ಟಿಕೆಟ್ ಮಿಸ್ siddaramaiah asiddaramaiah

ಹಾಗೆಯೇ ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಸ್ಲೀಂ ಮುಖಂಡರು ದಾಂಧಾಲೆ ನಡೆಸಿದ್ದಾರೆ ಎನ್ನಲಾಗಿದೆ. ಕಚೇರಿಯಲ್ಲಿನ ಪೀಠೋಪಕರಣಗಳನ್ನ ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Key words: Former CM- Siddaramaiah -misses -Kolar -ticket: Outrage -Muslim leaders