Saturday, September 19, 2026

BDA Apartments

Home Front Page ಈ ಬಾರಿ ದೊಡ್ಡ ಅಂತರದಿಂದ ಗೆಲ್ಲುವೆ: ಕಾಂಗ್ರೆಸ್ ಅಧಿಕಾರಕ್ಕೆ ತರಲು ಕೈ ಜೋಡಿಸುವೆ- ಮಾಜಿ ಡಿಸಿಎಂ...

ಈ ಬಾರಿ ದೊಡ್ಡ ಅಂತರದಿಂದ ಗೆಲ್ಲುವೆ: ಕಾಂಗ್ರೆಸ್ ಅಧಿಕಾರಕ್ಕೆ ತರಲು ಕೈ ಜೋಡಿಸುವೆ- ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ

ಬೆಳಗಾವಿ,ಏಪ್ರಿಲ್,15,2023(www.justkannada.in):  ಈ ಬಾರಿ ಅಥಣಿ ಕ್ಷೇತ್ರದಿಂದ ದೊಡ್ಡ ಅಂತರದಲ್ಲಿ ಗೆಲವು ಸಾಧಿಸುವೆ. ಕಾಂಗ್ರೆಸ್ ಅಧಿಕಾರಕ್ಕೆ ತರಲು ಕೈಜೋಡಿಸುವೆ  ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.

ಅಥಣಿ ಕ್ಷೇತ್ರದಿಂದ ತಮಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮಣ್ ಸವದಿ,    ನಾನು 20 ವರ್ಷಗಳ ಕಾಲ ಬಿಜೆಪಿಯಲ್ಲೇ ನಿಷ್ಠಯಿಂದ ಇದ್ದೆ.  ಮಹಾನುಭಾವನಿಂದ ಬಿಜೆಪಿ ಬಿಡಬೇಕಾಯಿತು. ಕಾಂಗ್ರಸ್ ನಲ್ಲಿದ್ದಾಗ ಆ ಮನೆ ಹಾಳು ಮಾಡಿದ್ದರು. ಬಿಜೆಪಿಗೆ ಬಂದು ಇಲ್ಲೂ ಹಾಳು ಮಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ದ ಗುಡುಗಿದರು.ಈ ಬಾರಿ ದೊಡ್ಡ ಅಂತರದಿಂದ ಗೆಲ್ಲುವೆ laxman savadi

ಅನೇಕರು ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದರು . ಕಾರ್ಯಕರ್ತರ ಸಲಹೆ ಮೇರೆಗೆ ಕಾಂಗ್ರೆಸ್ ಸೇರಿದೆ. ಅಥಣಿಯಿಂದ ಸ್ಪರ್ಧಿಸುವಂತೆ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಗೆ ಬಲ ತುಂಬಬೇಕು ಎಂದಿದ್ದಾರೆ ಬೇರೆ ಕಡೆಯೂ ಪ್ರಚಾರಕ್ಕೆ ಹೋಗಬೇಕು ಎಂದಿದ್ದಾರೆ. ನನ್ನ ನಿರ್ಧಾರ ಎಲ್ಲರಿಗೊ ಒಪ್ಪಿಗೆಯಾಗಿದೆ ಈ ಬಾರಿ ದೊಡ್ಡ ಅಂತರದಿಂದ ಗೆಲ್ಲುತ್ತೇನೆ. ಏಪ್ರಿಲ್ 17 ಅಥವಾ 18 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಲಕ್ಷ್ಮಣ್ ಸವದಿ ಹೇಳಿದರು.

Key words: Congress- will- join – bring – power- Former DCM -Laxman Savadi