Sunday, September 20, 2026

BDA Apartments

ಸಿದ್ಧರಾಮಯ್ಯಗೋಸ್ಕರ ನಾನು ಪೆಟ್ಟು ತಿಂದಿದ್ದೇನೆ: ಈಗ ನಾನು ಯಾರು ಅಂತಾ ಕೇಳ್...
Home Front Page ಸಿದ್ಧರಾಮಯ್ಯಗೋಸ್ಕರ ನಾನು ಪೆಟ್ಟು ತಿಂದಿದ್ದೇನೆ: ಈಗ ನಾನು ಯಾರು ಅಂತಾ ಕೇಳ್ತಿರಾ.?- ಸಚಿವ ವಿ.ಸೋಮಣ್ಣ ಕಿಡಿ.

ಸಿದ್ಧರಾಮಯ್ಯಗೋಸ್ಕರ ನಾನು ಪೆಟ್ಟು ತಿಂದಿದ್ದೇನೆ: ಈಗ ನಾನು ಯಾರು ಅಂತಾ ಕೇಳ್ತಿರಾ.?- ಸಚಿವ ವಿ.ಸೋಮಣ್ಣ ಕಿಡಿ.

ಚಾಮರಾಜನಗರ,ಏಪ್ರಿಲ್,21,2023(www.justkannada.in):  ಲಿಂಗಾಯತ ಸಿಎಂ ಮಾಡಲಿ ಎಂದಿದ್ದಕ್ಕೆ ಸೋಮಣ್ಣ ಯಾರು..? ಎಂದು ಪ್ರಶ್ನಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.

ಚಾಮರಾಜನಗರದಲ್ಲಿ ಇಂದು ಮಾತನಾಡಿದ ಸಚಿವ ವಿ.ಸೋಮಣ್ಣ, ನಾನು ಸಿದ್ಧರಾಮಯ್ಯಗೋಸ್ಕರ ಪೆಟ್ಟು ತಿಂದಿದ್ದೇನೆ. 2006ರ ಚುನಾವಣೆ ವೇಳೆ ಪೆಟ್ಟು ತಿಂದಿದ್ದೇನೆ. ಇದೀಗ ನಾನು ಯಾರು ಅಂತಾ ಕೇಳ್ತೀರಾ..? ಬರೀ ಮೈಯಲ್ಲಿ ದೇವಲಾಪುರದಿಂದ ಮೈಸೂರಿಗೆ ಹೋಗಿದ್ದೆ  ಅವತ್ತು  ನಿಮಗಾಗಿ ಕೆಲಸ ಮಾಡಿದ್ದು ಗೊತ್ತಿಲ್ವಾ..? ನಾನು ಸಾಹೇಬ್ರೆ ಅಂದ್ರೆ ನೀವು ಏಕವಚನದಲ್ಲಿ ಮಾತನಾಡುತ್ತೀರಿ. ಅವನ್ಯಾರು ಇವನ್ಯಾರು ಎಂಬ ಡೈಲಾಗ್ ಕಡಿಮೆ ಮಾಡಿ ಎಂದು ಗುಡುಗಿದರು.ಸಿದ್ಧರಾಮಯ್ಯಗೋಸ್ಕರ ನಾನು ಪೆಟ್ಟು ತಿಂದಿದ್ದೇನೆ somanna

Key words: former CM-Siddaramaiah-Minister- V. Somanna