Thursday, August 6, 2026

BDA Apartments

Home Front Page ಸಿದ್ಧರಾಮಯ್ಯ ‘ಕಂಬಳಿ’ ಮರ್ಯಾದೆ ತೆಗೆಯುತ್ತಿದ್ದಾರೆ- ಸಚಿವ ಸಿಸಿ ಪಾಟೀಲ್ ವಾಗ್ದಾಳಿ.

ಸಿದ್ಧರಾಮಯ್ಯ ‘ಕಂಬಳಿ’ ಮರ್ಯಾದೆ ತೆಗೆಯುತ್ತಿದ್ದಾರೆ- ಸಚಿವ ಸಿಸಿ ಪಾಟೀಲ್ ವಾಗ್ದಾಳಿ.

ವಿಜಯಪುರ,ಅಕ್ಟೋಬರ್,28,2021(www.justkannada.in):  ಕಂಬಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಸಮರ ಮತ್ತೆ ಮುಂದುವರೆದಿದ್ದು, ಸಿದ್ಧರಾಮಯ್ಯ ಕಂಬಳಿ ಮರ್ಯಾದೆ ತೆಗೆಯುತ್ತಿದ್ದಾರೆ. ಅವರು ಕಂಬಳಿ ನೆಯ್ದಿದ್ದಾರಾ..? ಎಂದು ಸಚಿವ ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಇಂದು ಮಾತನಾಡಿದ ಸಚಿವ ಸಿ.ಸಿ ಪಾಟೀಲ್, ಸಿದ್ಧರಾಮಯ್ಯ ಹುಚ್ಚು ಹುಚ್ಚರಂತೆ ಮಾತನಾಡುತ್ತಿದ್ದಾರೆ. ಇಷ್ಟೊಂದು ಮಾತನಾಡುವ ಅವಶ್ಯಕತೆ ಇರಲಿಲ್ಲ. ಸಿದ್ಧರಾಮಯ್ಯ ಮೊದಲು ಮಾತಿನ ದಾಟಿ ಸರಿ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಹಾಗೆಯೇ ಸಿದ್ಧರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಹುಚ್ಚರಂತೆ ಮಾತನಾಡುತ್ತಿದ್ದಾರೆ. ನವೆಂಬರ್ 2 ರಂದು ಎಲ್ಲವೂ ತಿಳಿಯಲಿದೆ ಎಂದು ಸಚಿವ ಸಿ.ಸಿ ಪಾಟೀಲ್ ನುಡಿದರು.

Key words: Former CM-Siddaramaiah-minister –CC Patil-kambali