Tuesday, September 15, 2026

BDA Apartments

ಯೋಗ್ಯ ಉದ್ಯೋಗಾಕಾಂಕ್ಷಿಗಳನ್ನು ನಿಮ್ಮ ಮನೆಗೆ ಕಳುಹಿಸಲೇ..? ಕಚೇರಿಗೆ ಕಳುಹಿಸ...
Home Front Page ಯೋಗ್ಯ ಉದ್ಯೋಗಾಕಾಂಕ್ಷಿಗಳನ್ನು ನಿಮ್ಮ ಮನೆಗೆ ಕಳುಹಿಸಲೇ..? ಕಚೇರಿಗೆ ಕಳುಹಿಸಲೇ..?- ಡಿಸಿಎಂ ಅಶ್ವಥ್ ನಾರಾಯಣ್ ಗೆ ಟಾಂಗ್...

ಯೋಗ್ಯ ಉದ್ಯೋಗಾಕಾಂಕ್ಷಿಗಳನ್ನು ನಿಮ್ಮ ಮನೆಗೆ ಕಳುಹಿಸಲೇ..? ಕಚೇರಿಗೆ ಕಳುಹಿಸಲೇ..?- ಡಿಸಿಎಂ ಅಶ್ವಥ್ ನಾರಾಯಣ್ ಗೆ ಟಾಂಗ್ ನೀಡಿದ ಹೆಚ್.ಡಿಕೆ…

ಬೆಂಗಳೂರು,ಜ,11,1,2020(www.justkannada.in): ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ಇಲ್ಲ. ವಾಸ್ತವದಲ್ಲಿರುವ ಉದ್ಯೋಗ ಭರ್ತಿ ಮಾಡಲು ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಹೇಳಿಕೆ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಕುಟುಕಿದ್ದಾರೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಉದ್ಯೋಗಕ್ಕೆ ಬರವಿಲ್ಲ. ಸೂಕ್ತ ಅಭ್ಯರ್ಥಿಗಳೇ  ಸಿಗುತ್ತಿಲ್ಲ ಎಂದು ಡಿಸಿಎಂ ಅಶ್ವತ್ಥನಾರಾಯಣ ನೀಡಿರುವ ಹೇಳಿಕೆ ಬೌದ್ಧಿಕ ದಿವಾಳಿತನದಿಂದ ಕೂಡಿದೆ. ಪಕೋಡ ತಯಾರಿಸಲು ಕೂಡ ಈರುಳ್ಳಿ ಕೊಳ್ಳಲೂ ಆರ್ಥಿಕವಾಗಿ ನಿಶಕ್ತರಾಗಿರುವ ನಿರುದ್ಯೋಗಿಗಳ ಕಣ್ಣಲ್ಲೇಕೆ ನೀರು ತರಿಸುವಿರಿ? ಎಂದು ಲೇವಡಿ ಮಾಡಿದ್ದಾರೆ.

ಹಾಗೆಯೇ ಇನ್ನೊಂದು ಟ್ವಿಟ್ ಮಾಡಿರುವ ಅವರು, ರಾಜ್ಯ ಸೇರಿದಂತೆ ದೇಶದಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಹೊಸ ಉದ್ಯೋಗ ಸೃಷ್ಟಿ ಒತ್ತಟ್ಟಿಗಿರಲಿ. ಇರುವ ಉದ್ಯೋಗ ಕಳೆದುಕೊಂಡು  ಉದ್ಯೋಗಸ್ಥರು ಬೀದಿಗೆ ಬಿದ್ದಿದ್ದಾರೆ. ಉದ್ಯೋಗಾಕಾಂಕ್ಷಿಗಳು ಕಂಗಾಲಾಗಿದ್ದಾರೆ ಎಂದಿದ್ದಾರೆ.

ಇಂತಹ ಹಸಿ ಸುಳ್ಳುಗಳನ್ನು ಯಾರನ್ನು ಮೆಚ್ಚಿಸಲು ಹೇಳುತ್ತೀರಿ? ನಾಚಿಕೆ ಆಗಬೇಕು ನಿಮಗೆ. ಯೋಗ್ಯ ಉದ್ಯೋಗಾಕಾಂಕ್ಷಿಗಳನ್ನು ನಿಮ್ಮ ಮನೆಗೆ ಕಳುಹಿಸಲೇ? ಕಚೇರಿಗೆ ಕಳುಹಿಸಲೇ? ಕೆಲಸ ಕೊಡಿಸುತ್ತೀರಾ? ಎಂದು ಡಿಸಿಎಂ ಅಶ್ವಥ್ ನಾರಾಯಣ್ ಗೆ ಹೆಚ್.ಡಿಕೆ ಪ್ರಶ್ನೆ ಹಾಕಿದ್ದಾರೆ.

Key words: former cm- hd kumaraswamy-tong –dcm ashwath narayan- Unemployment