ನಮ್ಮದು ಸರ್ವಜನಾಂಗದ ಶಾಂತಿಯ ತೋಟ: ರಕ್ತದೋಕುಳಿಯಾಡಿ ಧರ್ಮ ಕಟ್ಟೋ ಅಗತ್ಯ ಇಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಹುಬ್ಬಳ್ಳಿ,ಮಾರ್ಚ್,25,2022(www.justkannada.in):   ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿರುವ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ಏನು ಸಾಧನೆ ಮಾಡುತ್ತೀರಿ.  ದಿನಬಳಕೆ ವಸ್ತುಗಳು ಗಗನಕ್ಕೇರಿವೆ ಅದರ ಬಗ್ಗೆ ಗಮನ ಕೊಡಿ ಎಂದು ಸಲಹೆ ನೀಡಿದರು.

ಹಾಗೆಯೇ ರಕ್ತದೋಕುಳಿಯಾಡಿ ಧರ್ಮ ಕಟ್ಟೋ ಅವಶ್ಯಕತೆ ಇಲ್ಲ  ಸಮಾಧಿ ಮೇಲೆ ಧರ್ಮಕಟ್ಟುವ ಮನಸ್ಥಿತಿ ಯಾಕೆ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ.  ರಾಜ್ಯದ ಶಾಂತಿ ಕದಡಲು ಬಿಡಬೇಡಿ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: former CM-HD Kumaraswamy- Muslim traders