ಎಲ್ಲವನ್ನು ಎದುರಿಸಿ ಹೊರ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ-ಮಾಜಿ ಸಚಿವ ಡಿ.ಕೆ ಶಿವಕುಮಾರ್ ಭೇಟಿ ಬಳಿಕ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ

ನವದೆಹಲಿ,ಅ,21,2019(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ನವದೆಹಲಿಯ ತಿಹಾರ್ ಜೈಲಿಗೆ  ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಡಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ  ಸಂಸದ ಡಿ.ಕೆ ಸುರೇಶ್ ಉಪಸ್ಥಿತರಿದ್ದರು. ಇನ್ನು ಹೆಚ್.ಡಿ ಕುಮಾರಸ್ವಾಮಿ ಜತೆ ತೆರಳಿದ್ದ  ಮಾಜಿ ಸಚಿವರಾದ ಸಾ.ರಾ ಮಹೇಶ್ ಮತ್ತು ಸಿ.ಎಸ್ ಪುಟ್ಟರಾಜುಗೆ ಪ್ರವೇಶಕ್ಕೆ ಸಿಬ್ಬಂದಿಗಳು ಅವಕಾಶ ನಿರಾಕರಿಸಿದರು.

ಡಿಕೆ ಶಿವಕುಮಾರ್ ಭೇಟಿ  ಬಳಿಕ ಮಾಧ್ಯಮದ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನನ್ನ ಮತ್ತು ಡಿ.ಕೆ ಶಿವಕುಮಾರ್ ಭೇಟಿ ಸೌಹಾರ್ಧಯುತವಾದ ಭೇಟಿಯಾಗಿತ್ತು. ಡಿಕೆ ಶಿವಕುಮಾರ್ ಗೆ ಏಕೆ ಹೀಗೆ ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ.  ಎಲ್ಲವನ್ನು ಎದುರಿಸಿ ಹೊರಬರುವ ವಿಶ್ವಾಸವನ್ನ ಡಿಕೆಶಿ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲದರ ನಡುವೆಯೂ ಡಿಕೆಶಿ ಧೈರ್ಯವಾಗಿದ್ದಾರೆ. ಮುಂದಿನ ಮಾನಸಿಕ ಹೋರಾಟಕ್ಕೆ ಸಿದ್ಧರಾಗುತ್ತಿದ್ದಾರೆ ಎಂದು ನುಡಿದರು.

Key words:  former cm- hd kumaraswamy-meet-former minister- D.K shivakumar-tihar jail