Wednesday, August 12, 2026

BDA Apartments

Home Front Page ಕಣ್ಣೀರಿಟ್ಟ ಡಿ.ಕೆ ಶಿವಕುಮಾರ್ ತಾಯಿ ಗೌರಮ್ಮ ಅವರಿಗೆ ಧೈರ್ಯ ತುಂಬಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಕಣ್ಣೀರಿಟ್ಟ ಡಿ.ಕೆ ಶಿವಕುಮಾರ್ ತಾಯಿ ಗೌರಮ್ಮ ಅವರಿಗೆ ಧೈರ್ಯ ತುಂಬಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ರಾಮನಗರ,ಸೆ,6,2019(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಶಿವಕುಮಾರ್ ಅವರ ತಾಯಿ ಗೌರಮ್ಮಗೆ ಧೈರ್ಯ ತುಂಬಿದರು.

ರಾಮನಗರ ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯ ಡಿ.ಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ  ಡಿಕೆಶಿ ತಾಯಿ ಗೌರಮ್ಮ ಅವರ ಕಾಲಿಗೆ ನಮಸ್ಕರಿಸಿದರು. ಹೆಚ್ ಡಿ ಕುಮಾರಸ್ವಾಮಿ  ನೋಡುತ್ತಿದ್ದಂತೆ ಗೌರಮ್ಮ ಕೈ ಮುಗಿದು ಕಣ್ಣೀರಿಟ್ಟರು.

ಈ ಸಂದರ್ಭದಲ್ಲಿ  ನಿಮ್ಮ ಕಷ್ಟದಲ್ಲಿ ನಾನು ಕೂಡ ಭಾಗಿಯಾಗುತ್ತೇನೆ.  ಕಣ್ಣೀರಾಕಬೇಡಿ ಧೈರ್ಯ ತಂದುಕೊಳ್ಳಿ ಎಂದು ಭಾವುಕರಾಗಿ ಹೆಚ್ಡಿಕೆ ಸ್ಥೈರ್ಯ ತುಂಬಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ‌ ಹೆಚ್.ಡಿ ಕುಮಾರಸ್ವಾಮಿ, ಇಡಿ,ಐಟಿ ಅಧಿಕಾರಿಗಳನ್ನ ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಗುಜರಾತ್ ಶಾಸಕರನ್ನ ರಕ್ಷಣೆ ಕೊಟ್ಟಾಗಿನಿಂದ ನಿರಂತರವಾಗಿ ನಡೆಯುತ್ತಿದೆ. ಅವರೇನು ಸಾಕ್ಷ್ಯ ನಾಶ ಮಾಡಿಲ್ಲ. ನಮ್ಮ ಸಮುದಾಯದಲ್ಲಿ ವಿಜಯದಶಮಿ ಸಮಯದಲ್ಲಿ ಪಿತೃಪಕ್ಷ ಪೂಜೆ ಮಾಡುತ್ತೇವೆ. ನಮ್ಮ ಶಾಸಕನ್ನ ಹೈಜಾಕ್ ಮಾಡಲು 30ಕೋಟಿ ಹಣ ಕೊಟ್ಟಿದ್ದಾರೆ. ಅವರ ಮೇಲೆ ಯಾವ ದಾಳಿಯೂ ಆಗಿಲ್ಲ ಎಂದು ಹರಿಹಾಯ್ದರು.

ಸಿದ್ಧಾರ್ಥ ಅವರ ವಿಚಾರದಲ್ಲಿ ಐಟಿ ಇಲಾಖೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಲೆಟರ್ ನ‌‌ ಮುಚ್ಚಿ ಹಾಕಿದರು. ಎಲ್ಲಾದಕ್ಕೂ ಕಾಲವೇ ಉತ್ತರ ಕೊಡಲಿದೆ. ಕರ್ನಾಟಕದಲ್ಲಿ ಇದು ಹೊಸ ಅಧ್ಯಾಯಕ್ಕೆ ಕಾರಣವಾಗಲಿದೆ. ಎಲ್ಲಾ ಸಮಾಜದವರನ್ನ ಗೌರವಿಸಬೇಕು. ಈ ಪ್ರಕರಣ ಖಂಡನೀಯ ಎಂದು ಹೆಚ್.ಡಿ ಕುಮಾರಸ್ವಾಮಿ ಖಂಡಿಸಿದರು.

ಡಿ.ಕೆ ಶಿವಕುಮಾರ್ ಅವರನ್ನ ಕಸ್ಟಡಿಗೆ ತಗೆದುಕೊಂಡು ತನಿಖೆ ಮಾಡುವ ಅವಶ್ಯಕತೆ ಇರಲಿಲ್ಲ. ದ್ವೇಷದ ರಾಜಕಾರಣ ಮಾಡಲ್ಲ ಅಂತಾರೆ . ಅವರು ಮಾಡುತ್ತಿರೋದು ದ್ವೇಷದ ರಾಜಕಾರಣ. ಪ್ರವಾಹ ಬಂದಿದೆ ಅದರ ಬಗ್ಗೆ ಅವರಿಗೆ ಚಿಂತೆ ಇಲ್ಲ. ಜನಪರ ಕೆಲಸ ಮಾಡಲು ಮರೆತಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

Key words: Former CM- HD Kumaraswamy -DK Sivakumar-mother –Gouramma-ramanagar