Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ನನ್ನ ಬಗ್ಗೆ ಏನೇನು ಗೊತ್ತಿದೆಯೋ ಎಲ್ಲವನ್ನೂ ಬಹಿರಂಗಪಡಿಸಲಿ- ಶಾಸಕ ಯತ್ನಾಳ್ ಗೆ ಮಾಜಿ ಸಿಎಂ ಹೆಚ್.ಡಿಕೆ...

ನನ್ನ ಬಗ್ಗೆ ಏನೇನು ಗೊತ್ತಿದೆಯೋ ಎಲ್ಲವನ್ನೂ ಬಹಿರಂಗಪಡಿಸಲಿ- ಶಾಸಕ ಯತ್ನಾಳ್ ಗೆ ಮಾಜಿ ಸಿಎಂ ಹೆಚ್.ಡಿಕೆ ಸವಾಲು.

ವಿಜಯಪುರ,ಅಕ್ಟೋಬರ್,21,2021(www.justkannada.in): ಹೆಚ್.ಡಿ ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ. ಹೆಚ್.ಡಿಕೆ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ಬಾಯ್ಬಿಟ್ರೆ ಅದು ಬೇರೆಯಾಗುತ್ತೆ ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ನನ್ನ ಬಗ್ಗೆ ಏನೇನು ಗೊತ್ತಿದೆ ಎಲ್ಲವೂ ಬಹಿರಂಗಪಡಿಸಲಿ. ಪಾಪ ನನ್ನ ಜೊತೆ ಎರಡು ವರ್ಷ ಜೆಡಿಎಸ್ ನಲ್ಲಿ ಇದ್ದರು. ಅದಕ್ಕಾಗಿ ನನ್ನ ಬಗ್ಗೆ ಚರಿತ್ರೆ ಇದ್ದರೇ ಬಹಿರಂಗಪಡಿಸಿ ನೋಡೋಣಾ ಎಂದು ಸವಾಲು ಹಾಕಿದರು.

ಇದೇ ವೇಳೆ ಮಾಜಿ ಸಿಎಂ ಬಿಎಸ್ ವೈ ವಿರುದ್ದವೂ ಕಿಡಿಕಾರಿದ ಹೆಚ್.ಡಿ ಕುಮಾರಸ್ವಾಮಿ, ಕೇವಲ ರಾಜಕಾರಣಕ್ಕಾಗಿ ಯಡಿಯೂರಪ್ಪ ಹಿಂದುತ್ವದ ಹೆಸರು ಹೇಳುತ್ತಾರೆ. ಮುಸ್ಲಿಮರನ್ನು ದೇಶದ ಹೊರಗಿಡಲು ಹೇಳುತ್ತಾರೆ. ಮತ್ತೊಂದಡೆ ಮುಸ್ಲಿಮರು ನಮ್ಮ ಜೊತೆಗೆ ಬರುವಂತೆ ಹೇಳುತ್ತಾರೆ. ಬಿಜೆಪಿಯವರು ಸಮಯ ಸಾಧಕರು, ಯಾವಾಗ ಏನು ಹೇಳಬೇಕು ಎಂದು ಅವರಿಗೆ ಗೊತ್ತಿದೆ. ಬಿಜೆಪಿಯವರು ತಾವು ಹೇಳಿದ್ದ ಮಾತು ಮರೆತು ಹೋಗುತ್ತಾರೆ ಎಂದು  ಕಿಡಿಕಾರಿದರು.

Key words: Former CM –HD Kumaraswamy- challenge – MLA –basanagowda patil Yatnal