Tuesday, August 4, 2026

BDA Apartments

Home Front Page ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎಂದ ಡಿಕೆಶಿ ಮತ್ತು ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಬಿಎಸ್ ವೈ...

ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎಂದ ಡಿಕೆಶಿ ಮತ್ತು ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಬಿಎಸ್ ವೈ ವಾಗ್ದಾಳಿ.

ಕಲ್ಬುರ್ಗಿ,ಜನವರಿ,21,2023(www.justkannada.in): ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯಗೆ ತಲೆಕೆಟ್ಟಿದೆ.   ನಾವು ಮಾಡಿದ ಕಾರ್ಯಕ್ರಮಗಳನ್ನ ಜನ ಹಾಡಿ ಹೊಗಳುತ್ತಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡಿದ್ರೆ ಯಾಕೆ ಅಧಿಕಾರ ಕಳೆದುಕೊಂಡರು ಹುಚ್ಚುಹುಚ್ಚಾಗಿ ಮಾತನಾಡುವುದು ಡಿಕೆಶಿ, ಸಿದ್ಧರಾಮಯ್ಯಗೆ ಶೋಭೆ ತರಲ್ಲ ವಿರೋಧಿ ಪಕ್ಷದ ನಾಯಕರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಅನೇಕ ನಾಯಕರು ನಾವೇ ಸಿಎಂ ಅಂತ ತಿರುಕನ ಕನಸು ಕಾಣುತ್ತಿದ್ದಾರೆ.  ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು  ಬಿಎಸ್ ವೈ  ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ತಮ್ಮನ್ನ ಕಡೆಗಣನೆ ಆರೋಪ ಕುರಿತು ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ಬೇರೆ ಸಭೆಗೆ ಹೋಗಿದ್ದರಿಂದ ನಿನ್ನೆ ಬಿಜೆಪಿ ಸಭೆಗೆ ನಾನು ಹೋಗಿಲ್ಲ.  ನಿನ್ನೆ ಬಿಜೆಪಿ ಸಭೆಗೆ ಹೋಗದಿದ್ದಕ್ಕೆ ವಿಶೇಷ ಕಾರಣವಿಲ್ಲ. ಬಿಜೆಪಿ ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಸ್ಥಾನಮಾನ ನೀಡಿದೆ ಎಂದರು.

Key words: Former CM-BS Yeddyurappa- DK Shivakumar – Siddaramaiah