ನಿಮ್ಮ ಮನೆಗಳಿಗೆ ಕೊಟ್ಟು ತಿನ್ನುತಾರಾ ನೋಡಿ: ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲಿಸಿ ಅಧಿಕಾರಿಗಳ ವಿರುದ್ದ ಗರಂ ಆದ ಸಚಿವ ಗೋಪಾಲಯ್ಯ…

ಯಾದಗಿರಿ,ಜೂ,11,2020(www.justkannada.in): ಯಾದಗಿರಿ ಜಿಲ್ಲೆ ಯರಗೋಳ ನ್ಯಾಯ ಬೆಲೆ ಅಂಗಡಿ ಮತ್ತು ಗೋದಾಮುಗಳಿಗೆ ಭೇಟಿ ನೀಡಿದ ಆಹಾರ ಸಚಿವ ಗೋಪಾಲಯ್ಯ ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.food-minister-gopalaiah-visit-ration-society

ಪಡಿತರಿಗೆ ನೀಡುತ್ತಿರುವ ಆಹಾರ ಧಾನ್ಯಗಳ ಗುಣಮಟ್ಟ ವೀಕ್ಷಿಸಿದ ಆಹಾರ ಸಚಿವ ಗೋಪಾಲಯ್ಯ,  ಕಳಪೆ ಮಟ್ಟದ ಬೇಳೆ ಕಡಲೆಕಾಳು ನೋಡಿ ಅಧಿಕಾರಿಗಳ ಮೇಲೆ ಗರಂ ಆದರು. ಅಲ್ಲದೆ ಇದನ್ನ ನಿಮ್ಮ ಮನೆಗಳಿಗೆ ಕೊಡಿ ತಿನ್ನುತಾರ ನೋಡಿ  ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಈ ಕಾಳುಗಳನ್ನು ನೀಡಬೇಡಿ ಹಿಂದಿರುಗಿಸಿ ಎಂದು ಸಚಿವ ಗೋಪಾಲಯ್ಯ  ಅಧಿಕಾರಿಗಳಿಗೆ ಸೂಚಿಸಿದರು.

Key words: food- minister- gopalaiah-visit- Ration- Society