ಬಿಎಂಟಿಸಿ ಉದ್ಯೋಗಿಗೆ ಕೊರೋನಾ ಸೋಂಕು ದೃಢ…

ಬೆಂಗಳೂರು,ಜೂ,11,2020(www.justkannada.in):  ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕಿತ ಬಿಎಂಟಿಸಿ ಉದ್ಯೋಗಿ 3 ದಿನಗಳ ರಜೆಯಲ್ಲಿದ್ದು, ಸ್ವಯಂಪ್ರೇರಿತವಾಗಿ  ಕೋವಿಡ್ -19 ನಿಗದಿತ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದರು. ಇದೀಗ ಬಿಎಂಟಿಸಿ ಉದ್ಯೋಗಿಗೆ ಕೊರೋನಾ ಸೊಂಕಿರುವುದು ಪರೀಕ್ಷೆಯ ವರೆದಿಯಲ್ಲಿ ಖಚಿತವಾಗಿದೆ.coronavirus-infection-confirmed-bmtc-employee

ದೈನಂದಿನ ಕರ್ತವ್ಯಕ್ಕೆ ವರದಿ ಮಾಡುವಾಗ, ಅವರಿಗೆ ಜ್ವರ ಅಥವಾ ಆರೋಗ್ಯ ಸಮಸ್ಯೆಯ ಯಾವುದೇ ಲಕ್ಷಣಗಳು ಇರಲಿಲ್ಲ.  ಸೋಂಕಿತ ವ್ಯಕ್ತಿ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಿಗೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ. ಆರೋಗ್ಯ ಸಂಪರ್ಕ ಅಧಿಕಾರಿಗಳಿಂದ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಪ್ರಾರಂಭಿಸಲಾಗಿದೆ.

ನಿಗದಿತ ಮಾನದಂಡಗಳ ಪ್ರಕಾರ ಕೆಲಸದ ಸ್ಥಳವನ್ನು ಸೋಂಕುರಹಿತ ಮತ್ತು ಸ್ವಚ್ಚಗೊಳಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಮುಂದಿನ ಕ್ರಮಗಳನ್ನು ಪ್ರಾರಂಭಿಸಲಾಗುವುದು. ಬಿಎಂಟಿಸಿ ತನ್ನ ನೌಕರರ ಮತ್ತು ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.ಇನ್ನು ಕೊರೋನಾ ಸೋಂಕಿತ ಉದ್ಯೋಗಿಯನ್ನ ಚಿಕಿತ್ಸೆಗಾಗಿ ಕೋವಿಡ್ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

Key words: Coronavirus- infection- confirmed – BMTC- employee.