ಬೆಂಗಳೂರು ಗ್ರಾಮಾಂತರ ಜನವರಿ, 07,2026 (www.justkannada.in): ಕರ್ನಾಟಕ ಜಾನಪದ ಅಕಾಡೆಮಿಯು ಫೆಲೋಶಿಪ್ (ಅಧ್ಯಯನ ವೇತನ) ಲೇಖನಗಳಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಅಕಾಡೆಮಿಯ ವೆಬ್ ಸೈಟ್ ನಲ್ಲಿ ತಿಳಿಸಿರುವ ಶೀರ್ಷಿಕೆಗಳನ್ನು ಆಧರಿಸಿ ಕ್ಷೇತ್ರಕಾರ್ಯ ನಡೆಸಿ, ಅಧ್ಯಯನ ಕೃತಿಗಳನ್ನು ಸಿದ್ಧಪಡಿಸಿಕೊಡಲು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನಿಗದಿಪಡಿಸಿರುವ ಒಂದು ಶೀರ್ಷಿಕೆಯನ್ನು ಆಯ್ಕೆ ಮಾಡಿ 5 ಪುಟಗಳ ಸಾರಾಲೇಖ (Synopsis) ವನ್ನು ಬರೆದು, ಜ.23 ರ ಒಳಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಇವರಿಗೆ ಕಳುಹಿಸಿಕೊಡಲು ಕೋರಿದೆ.
ಸಾರಾಲೇಖ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆಲೋಶಿಪ್ ಕಾರ್ಯ ನಡೆಸಲು ಆದೇಶ ನೀಡಲಾಗುವುದು. ಫೆಲೋಶಿಪ್ ಗಾಗಿ ಸಾಮಾನ್ಯ -1, ಪರಿಶಿಷ್ಟ ಜಾತಿ-5 ಮತ್ತು ಪರಿಶಿಷ್ಟ ಪಂಗಡ-9 ಮಂದಿಗಳು ಸೇರಿದಂತೆ 15 ಮಂದಿಗಾಗಿ ಅಭ್ಯರ್ಥಿಗಳಿಂದ ಫೆಲೋಶಿಪ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ, ಫೆಲೋಶಿಪ್ ಶೀರ್ಷಿಕೆಗಳು ಮತ್ತು ಇತರೆ ವಿವರಗಳಿಗಾಗಿ ಅಕಾಡೆಮಿಯ ವೆಬ್‌ಸೈಟ್ https://janapada.karnataka.gov.in ನಿಂದ ಮಾಹಿತಿ ಪಡೆಯಬಹುದು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Application, Invitation , Folk Academy, Fellowship







