‘ನೆರೆ ಸಂತ್ರಸ್ತರ ಕರೆ ಬಂದ್ರೆ ಫೋನ್ ಬಿಸಾಡಬೇಕೆನಿಸುತ್ತೆ’- ಬಿಜೆಪಿ ಶಾಸಕನ ಉಡಾಫೆ ಮಾತು.

ಬೆಳಗಾವಿ,ಜುಲೈ,31,2021(www.justkannada.in):  ಕಳೆದ ಒಂದು ವಾರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕ ಕರಾವಳಿ ಭಾಗದ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಏಕಾಏಕಿ ನದಿ ನೀರು ಮನೆಗಳಿಗೆ ನುಗ್ಗಿ ನೆರೆ ಸಂತ್ರಸ್ತರು ಪರದಾಡುವಂತಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಮಧ್ಯೆ ಬಿಜೆಪಿ ಶಾಸಕರೊಬ್ಬರು ನೆರೆ ಸಂತ್ರಸ್ತರ ಬಗ್ಗೆ ಉಡಾಫೆ ಮಾತುಗಳನ್ನಾಡಿದ್ದಾರೆ.

ಹೌದು, ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮುಟಳ್ಳಿ, ನೆರೆ ಸಂತ್ರಸ್ತರ ಬಗ್ಗೆ ಅಸಡ್ಡೆ ಮಾತುಗಳನ್ನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆರೆ ಬಂದು ಬೇರೆ ಬೇರೆ ಕಡೆ ಸಾಕಷ್ಟು ಸಮಸ್ಯೆಯಾಗಿದೆ. ನೆರೆ ಸಂತ್ರಸ್ತರಿಂದ ಕರೆ ಬಂದರೆ ಫೋನ್ ಬಿಸಾಡಬೇಕೆನಿಸುತ್ತೆ. ಬೆಡ್ ಶಿಟ್ ಹಾಕಿಕೊಂಡು ಮಲಗಿಬಿಡೋಣ ಅನಿಸುತ್ತದೆ ಎಂದು ಹೇಳಿದ್ದು ಇದಕ್ಕೆ ನೆರೆ ಸಂತ್ರಸ್ತರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ನೆರೆಸಂತ್ರಸ್ತರು ಹಾಗೂ ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಶಾಸಕ ಮಹೇಶ್ ಕುಮುಟಳ್ಳಿ ಕ್ಷಮೆ ಕೋರಿದ್ದಾರೆ. ನಾನು ಈ ರೀತಿ ಮಾತನಾಡಿದ್ದು ತಪ್ಪು. ಸಂತ್ರಸ್ತರ ಬಗ್ಗೆ ಈ ರೀತಿ  ಹೇಳಿಕೆ ನೀಡಿದ್ದು ತಪ್ಪಾಗಿದೆ ಎಂದು ಹೇಳಿದ್ದಾರೆ.

Key words: flood-victims – throw away –phone-BJP- MLA –Mahesh kumtalli