ಆಗಸ್ಟ್ 25 ರಿಂದ ಹುಬ್ಬಳ್ಳಿಯಿಂದ ಮುಂಬೈಗೆ ವಿಮಾನ ಸೇವೆ ಶುರು

ಹುಬ್ಬಳ್ಳಿ, ಆಗಸ್ಟ್ 01, 2020 (www.justkannada.in): ವಾಣಿಜ್ಯ ನಗರಿಯಿಂದ ಮುಂಬೈಗೆ ರದ್ದಾಗಿದ್ದ ಇಂಡಿಗೊ ಸಂಸ್ಥೆಯ ನೇರ ವಿಮಾನ ಸಂಚಾರ ಆಗಸ್ಟ್ 25ಕ್ಕೆ ಪುನರಾರಂಭವಾಗಲಿದೆ.

25ರಿಂದ ನಗರದಿಂದ ಮುಂಬೈ, ಅಹಮದಾಬಾದ್‌, ಚೆನ್ನೈ, ಮಂಗಳೂರು ಮತ್ತು ಕೊಚ್ಚಿಗೆ ಸಂಚಾರ ಆರಂಭಿಸಲಿವೆ ಎಂದು ಇಂಡಿಗೊ ಸಂಸ್ಥೆ ಸಿಬ್ಬಂದಿ ತಿಳಿಸಿದ್ದಾರೆ. ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ.

ಸ್ಟಾರ್‌ ಏರ್‌ ಸಂಸ್ಥೆಯ ವಿಮಾನಗಳು ಆ. 16ರಿಂದ ಇಲ್ಲಿಂದ ದೆಹಲಿಯ ಹೊರವಲಯದ ಪ್ರದೇಶ ಹಿಂಡನ್‌ ಮತ್ತು ಬೆಂಗಳೂರಿಗೆ ಸಂಚಾರ ಆರಂಭಿಸಲಿವೆ. ವಾರದಲ್ಲಿ ನಾಲ್ಕು ದಿನ ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಹಿಂಡನ್‌ಗೆ ವಿಮಾನ ಸಂಚರಿಸಲಿದೆ.