ಫ್ಲೆಕ್ಸ್ ಹಾಕುವವರು ಯಾರೇ ಆದರೂ ಅನುಮತಿ ಪಡೆಯಬೇಕು- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು,ಸೆಪ್ಟಂಬರ್,29,2022(www.justkannada.in):  ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಫ್ಲೆಕ್ಸ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಫ್ಲೆಕ್ಸ್ ಹಾಕುವವರು ಯಾರೇ ಆದರೂ ಸರಿ ಅನುಮತಿ ಪಡೆಯಬೇಕು.  ಯಾವುದೇ ಪಕ್ಷದ  ಫ್ಲೆಕ್ಸ್ ಹರಿಯುವ ಅವಶ್ಯಕತೆ ಇಲ್ಲ ಎಂದರು.

ಪಿಎಫ್ ಐ ಬ್ಯಾನ್ ಎಲೆಕ್ಷನ್ ಗಿಮಿಕ್  ಎಂದ ಬಿಕೆ ಹರಿಪ್ರಸಾದ್ ಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಬಿಕೆ ಹರಿಪ್ರಸಾದ್ ಗೆ  ವ್ಯಾಖ್ಯಾನ ಮಾಡಲು ಬರಲ್ಲ.  ಪಿಎಫ್ ಐ ಬ್ಯಾನ್ ಗೆ ಎಲ್ಲರೂ ಒತ್ತಾಯಿಸಿದ್ದರು. ಈಗ ಎಲೆಕ್ಷನ್ ಗಿಮಿಕ್ ಅಂತಿರೋದು ಎಷ್ಟು ಸರಿ…? ಎಂದು ಪ್ರಶ್ನಿಸಿದರು.

ಎಸ್ ಡಿಪಿಐ ರಜಕೀಯ ಪಕ್ಷ ಅದಕ್ಕೆ ಬೇರೆ ಕಾನೂನಿದೆ ಎಸ್ ಡಿಪಿಐ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗದುಕೊಂಡಿಲ್ಲ ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

Key words:  flex -should – permission-CM Basavaraja Bommai-congress