Thursday, September 24, 2026

BDA Apartments

Home Crime ಮುತ್ತತ್ತಿಯಲ್ಲಿ ಐವರು ಜಲಸಮಾಧಿ ಪ್ರಕರಣ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮಂಡ್ಯ ಡಿಸಿ

ಮುತ್ತತ್ತಿಯಲ್ಲಿ ಐವರು ಜಲಸಮಾಧಿ ಪ್ರಕರಣ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮಂಡ್ಯ ಡಿಸಿ

ಮಂಡ್ಯ,ಜೂನ್,25,2026 (www.justkannada.in):  ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಇಳಿದು ಫೋಟೊ ತೆಗೆದುಕೊಳ್ಳಲು ಹೋದಾಗ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.

ಚೈತ್ರ(20), ಶ್ವೇತಾ(38), ವಿಜಯಮ್ಮ(50), ಪ್ರಿಯಾಂಕ(28) ಮಹೇಶ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಐವರ ಮೃತದೇಹವನ್ನ ಮಿಮ್ಸ್ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇಡಲಾಗಿತ್ತು. ಈ ವೇಳೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ,  ಮುತ್ತತ್ತಿಯಲ್ಲಿ ಐವರು ಸಾವನ್ನಪ್ಪಿರುವುದು ವಿಷಾದದ ಸಂಗತಿ. ನದಿಗಿಳಿದು ಫೋಟೊ ತೆಗೆದುಕೊಳ್ಳುವಾಗ ಈ ಅಚಾತುರ್ಯ ನಡೆದಿದೆ. ಒಬ್ಬರು ಬಿದ್ದಾಗ ಅವರನ್ನ ರಕ್ಷಿಸಲು ಹೋಗಿ ಐವರು ಸಾವನ್ನಪ್ಪಿದ್ದಾರೆ.  ಮೃತರ ಕುಟುಂಬದವರನ್ನ ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ ಎಂದರು.ಮುತ್ತತ್ತಿಯಲ್ಲಿ ಐವರು ಜಲಸಮಾಧಿ ಪ್ರಕರಣ jk02_new jk02 new

Key words: Five people, drowned, Muthathi, Mandya DC, consoles, family members