Friday, July 31, 2026

BDA Apartments

Home Crime ಜವರಾಯನ ಅಟ್ಟಹಾಸ: ಟಿಪ್ಪರ್ ಡಿಕ್ಕಿಯಾಗಿ ಗೂಡ್ಸ್ ವಾಹನದಲ್ಲಿದ್ದ ಐವರು ದುರ್ಮರಣ…

ಜವರಾಯನ ಅಟ್ಟಹಾಸ: ಟಿಪ್ಪರ್ ಡಿಕ್ಕಿಯಾಗಿ ಗೂಡ್ಸ್ ವಾಹನದಲ್ಲಿದ್ದ ಐವರು ದುರ್ಮರಣ…

ವಿಜಯಪುರ,ಮೇ,18.2019(www.justkannada.in):   ಸಂಬಂಧಿಯೊಬ್ಬರ ಅಂತ್ಯಕ್ರಿಯೆ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿಯಾಗಿ ಗೂಡ್ಸ್  ವಾಹನದಲ್ಲಿದ್ದ ಐವರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಮುದ್ದೇಬಿಹಾಳ ತಾಲೂಕಿನ ಕಂದಗನೂರು ಬಳಿ ಈ ಘಟನೆ  ನಡೆದಿದೆ. ಸಂಬಂಧಿಯೊಬ್ಬರ ಅಂತ್ಯಕ್ರಿಯೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಕಂದಗನೂರಿನಲ್ಲಿ ಈ ಅವಘಡ ಸಂಭವಿಸಿದೆ. ಮೃತರು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹಳದೂರ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.

ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎನ್ನಲಾಗುತ್ತಿದ್ದು, ಅವರನ್ನ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್‌ ಠಾಯಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Five deaths in the Goods Vehicle collided with Tipper.

#Accidentnews #vijayapura #death  #policestation