ವಿಶ್ವದಲ್ಲೇ ಒಮಿಕ್ರಾನ್ ಗೆ ಮೊದಲ ಬಲಿ: ಎಲ್ಲಿ ಗೊತ್ತೆ..?

ಬ್ರಿಟನ್,ಡಿಸೆಂಬರ್,13,2021(www.justkannada.in): ಕೊರೊನಾ ಹೊಸ ತಳಿ ಒಮಿಕ್ರಾನ್ ಇದೀಗ ವಿಶ್ವದೆಲ್ಲಡೆ ಆತಂಕ ಸೃಷ್ಠಿಸುತ್ತಿದ್ದು ಇದೀಗ ಈ ಸೋಂಕಿಗೆ ಮೊದಲ ಬಲಿಯಾಗಿದೆ.

ಇಂಗ್ಲೇಂಡ್ ನಲ್ಲಿ ಒಮಿಕ್ರಾನ್ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಕುರಿತು ಬ್ರಿಟನ್ ಅಧಿಕೃತವಾಗಿ ಘೋಷಣೆ ಮಾಡಿದೆ. ಬ್ರಿಟನ್ ನಲ್ಲಿ ನಿನ್ನೆಯಷ್ಟೇ ಒಮಿಕ್ರಾನ್ ಎಮರ್ಜೆನ್ಸಿ ಘೋಷಿಸಲಾಗಿತ್ತು. ಇದೀಗ ಇಂದು ಒಮಿಕ್ರಾನ್ ಗೆ ಬ್ರಿಟನ್ ನಲ್ಲಿ ಮೊದಲ ಬಲಿಯಾಗಿದೆ.

ಈ ಕುರಿತು ಮಾತನಾಡಿರುವ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್, ಒಮಿಕ್ರಾನ್ ಬಾರಿ ಪ್ರಮಾಣದಲ್ಲಿ ಹರಡುತ್ತದೆ. ಒಮಿಕ್ರಾನ್ ಗೆ 2 ಡೋಸ್ ಸಾಕಾಗಲ್ಲ.  ಒಮಿಕ್ರಾನ್ ತಡೆಗೆ ಬೂಸ್ಟರ್ ಡೋಸ್ ಬೇಕು ಎಂದು ತಿಳಿಸಿದ್ದಾರೆ. ಲಂಡನ್ ನಲ್ಲಿ ಶೇ.40 ರಷ್ಟು ಒಮಿಕ್ರಾನ್ ಕಾಣಿಸಿಕೊಂಡಿದೆ.

Key words: first victim – Omicron –death- world-England