Wednesday, August 12, 2026

BDA Apartments

Home Front Page ಮೊದಲು ಜಾಮೂನು ಕೊಟ್ಟು ನಂತರ ವಿಷ ಕೊಡುವುದು ಕಾಂಗ್ರೆಸ್ ನಲ್ಲಿ- ಮಾಜಿ ಸಚಿವ ಅಶ್ವತ್ ನಾರಾಯಣ್...

ಮೊದಲು ಜಾಮೂನು ಕೊಟ್ಟು ನಂತರ ವಿಷ ಕೊಡುವುದು ಕಾಂಗ್ರೆಸ್ ನಲ್ಲಿ- ಮಾಜಿ ಸಚಿವ ಅಶ್ವತ್ ನಾರಾಯಣ್ ತಿರುಗೇಟು.

ಬೆಂಗಳೂರು ,ನವೆಂಬರ್,9,2023(www.justkannada.in):ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದಾಗ  ಮೊದಲು ಜಾಮೂನು ಕೊಡುತ್ತಾರೆ ನಂತರ ವಿಷ ಕೊಡುತ್ತಾರೆ ಎಂದು ಹೇಳಿಕೆ ನೀಡಿದ್ದ ತಮ್ಮದೇ ಪಕ್ಷದ ಶಾಸಕ ಎಸ್ ಟಿ ಸೋಮಶೇಖರ್ ಗೆ ಮಾಜಿ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್,  ಜಾಮೂನು ಕೊಟ್ಟು ನಂತರ ವಿಷ ಕೊಡುವುದು ಕಾಂಗ್ರೆಸ್ ಪಕ್ಷದಲ್ಲಿ. ಎಸ್ ಟಿ ಸೋಮಶೇಖರ್ ಅವರಿಗೆ ಪಕ್ಷ ಎಲ್ಲಾ ಕೊಟ್ಟಿದೆ. ಯಾರನ್ನು ಅಗೌರವದಿಂದ ನಡೆಸಿಕೊಳ್ಳಲ್ಲ. ಆದರೂ ಯಾವ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ಸೋಮಶೇಖರ್ ಗೆ ಬಿಜೆಪಿ ಎಲ್ಲಾ ರೀತಿಯಿಂದ ಸ್ಥಾನಮಾನವನ್ನು ಕೊಟ್ಟು ಗೌರವಿಸಿದೆ. ಶಾಸಕ ಸೋಮಶೇಖರ್ ರನ್ನು ಒಂದು ದಿನವೂ ಬಿಜೆಪಿ ಪಕ್ಷ ಕಡೆಗಣಿಸಿಲ್ಲ. ಕಾಂಗ್ರೆಸ್ ನಲ್ಲಿ ಜಾಮೀನು ವಿಷ ಕೊಡುವುದು. ಶಾಸಕ ಎಸ್ ಟಿ ಸೋಮಶೇಖರ್ ಹೆಗಲ ಮೇಲೆ ಭಾರ ಹಾಕಿಲ್ಲ. ಬಿಜೆಪಿಯಲ್ಲಿದ್ದು ಈ ರೀತಿ ಹೇಳಿಕೆ ಕೊಡುವುದು ಸೂಕ್ತವಲ್ಲ. ಸೋಮಶೇಖರ್ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಮೆಚ್ಚಿಸಲು ಮಾತನಾಡುತ್ತಿದ್ದಾರೆ. ಅವರೇ ಮುಳುಗುತ್ತಿದ್ದಾರೆ ಇವರು ಯಾಕೆ ಆ ಹಡಗು ಹತ್ತುತ್ತಿದ್ದಾರೋ ಗೊತ್ತಿಲ್ಲ. ಸೋಮಶೇಖರ್ ಏನೇ ಮಾತು ಹೇಳಿದರೂ ವಾಪಸ್ ಪಡೆಯಬೇಕು ಎಂದು ಅಶ್ವಥ್ ನಾರಾಯಣ್ ಆಗ್ರಹಿಸಿದರು.

Key words: First -give -jamun – poison – Congress- Former Minister -Ashwath Narayan