ವಿಪಕ್ಷ ನಾಯಕ ಆರ್.ಅಶೋಕ್ ಸೇರಿ 42 ಜನರ ವಿರುದ್ದ ಎಫ್ ಐಆರ್ ದಾಖಲು.

ಹುಬ್ಬಳ್ಳಿ,ಜನವರಿ,5,2024(www.justkannada.in): ರಾಮ ಜನ್ಮಭೂಮಿ ಪ್ರಕರಣದಲ್ಲಿ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಸೇರಿ 42 ಜನರ ವಿರುದ್ದ ಎಫ್ ಐಆರ್ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಜನವರಿ 3ರಂದು ಶಹರ ಪೊಲೀಸ್ ಠಾಣೆ ಎದುರು ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಈ ಸಂಬಂಧ  ಬಿಜೆಪಿ ಮುಖಂಡರು ಸಿಎಂ ಗೃಹ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕೋಮು ಗಲಭೆ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿ  ಶಹರ ಪೊಲಿಸ್ ಠಾಣೆಗೆ ಕಾಂಗ್ರೆಸ್  ನಿಯೋಗ ದೂರು ನೀಡಿತ್ತು.

ಈ ಸಂಬಂಧ ಪ್ರತಿಪಕ್ಷ ನಾಯಕ ಆರ್ ಅಶೋಕ್,ಮಹೇಶ್ ಟೆಂಗಿನಕಾಯಿ,ಅರವಿಂದ ಬೆಲ್ಲದ್ ಸೇರಿದಂತೆ 42 ಜನರ ವಿರುದ್ದ ಎಫ್ ಐ ಆರ್ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: FIR- filed -against -42 people -opposition leader -R. Ashok.