ಸಣ್ಣ ಸಣ್ಣ ಘಟನೆಗಳನ್ನ ದೊಡ್ಡದು ಮಾಡಿ ಗೃಹಸಚಿವರು, ಸರ್ಕಾರದ ವಿರುದ್ದ ಬಿಜೆಪಿ ಪಿತೂರಿ- ಹೆಚ್.ಎ ವೆಂಕಟೇಶ್

ಮೈಸೂರು,ಜನವರಿ,5,2024(www.justkannada.in):  ರಾಜ್ಯದಲ್ಲಿ ಬಿಜೆಪಿ ಸಣ್ಣ ಸಣ್ಣ ಘಟನೆಗಳನ್ನ ದೊಡ್ಡದು ಮಾಡಿ ಗೃಹಸಚಿವರು, ಸರ್ಕಾರದ ವಿರುದ್ದ ಪಿತೂರಿ ಮಾಡುತ್ತಿದೆ.  ಇದು ಸರಿಯಾದ ಕೆಲಸ ಅಲ್ಲ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಕಿಡಿಕಾರಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಯುವ ಸೈನ್ಯ ಮೈಸೂರು ಜಿಲ್ಲೆ ವತಿಯಿಂದ  ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮಹೇಶ್, ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ ಜೆ ವಿಜಯ್ ಕುಮಾರ್,  ವಿಶ್ರಾಂತ ಕುಲಪತಿ ವೆಂಕಟರಾಮಯ್ಯ,  ಕಾಂಗ್ರೆಸ್ ನಗರಾದ್ಯಕ್ಷ ಮೂರ್ತಿ ಮತ್ತಿತರರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಹೆಚ್.ಎ ವೆಂಕಟೇಶ್, ಪರಮೇಶ್ವರ್  ಅವರು ಹಿರಿಯ ರಾಷ್ಟ್ರೀಯ ಮುತ್ಸುದ್ದಿ ನಾಯಕರು, ಉತ್ತಮ ರಾಜಕಾರಣಿ. ಹತ್ತಾರು ಖಾತೆಗಳನ್ನ ನಿರ್ವಹಿಸಿ ಆ ಖಾತೆಗಳಿಗೆ ಶಕ್ತಿಯನ್ನ ತುಂಬಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್  ಪ್ರಣಾಳಿಕ ಸಮಿತಿ ಅಧ್ಯಕ್ಷರಾಗಿದ್ದರು. ಪ್ರಣಾಳಿಕೆ ಮೂಲಕ ಮತದಾರರನ್ನ ಸೆಳೆದಿದ್ದಾರೆ. ಇಡೀ ದೇಶವೇ ಕರ್ನಾಟಕದ ಪ್ರಣಾಳಿಕೆಯನ್ನ ನೋಡುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯನ್ನ ಕಾಪಿ ಮಾಡುತ್ತಿದೆ. ಯಾರು ಗ್ಯಾರಂಟಿ ಯೋಜನೆ ಬಗ್ಗೆ ಅಪಹಾಸ್ಯ ಮಾಡುತ್ತಿದ್ದರೋ ಅವರೇ ಈಗ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಗೃಹ ಮಂತ್ರಿಯಾಗಿ ಪರಮೇಶ್ವರ್ ಅವರು ಪೊಲೀಸ್ ಇಲಾಖೆಯಲ್ಲಿ  ಪ್ರೊಮೋಷನ್ ಕೊಟ್ಟಷ್ಟು ಇದುವರೆಗೂ ಯಾರೂ ಕೊಟ್ಟಿಲ್ಲ. ಪೊಲೀಸರ ರಕ್ಷಣೆ ಮತ್ತು ಅವರನ್ನ ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುವ ಕೆಲಸವನ್ನ ಪರಮೇಶ್ವರ್  ಮಾಡುತ್ತಿದ್ದಾರೆ ಎಂದರು.

ಪ್ರಸ್ತುತ ಹಳೆ ಪ್ರಕರಣದ ಬಗ್ಗೆ  ಮಾತನಾಡುತ್ತಿದ್ದಾರೆ. ಹೈಕೋರ್ಟ್ಆದೇಶವೇ ಇದೆ. ಉನ್ನತ ನ್ಯಾಯಾಲಯಗಳು, ಕೇಂದ್ರ ಸರ್ಕಾರದ ಆದೇಶವೂ ಇದೆ. ಹಲವು ಕೇಸ್ ಗಳು ಬಾಕಿ ಉಳಿದಿವೆ. ಶೀಘ್ರವೇ ವಿಚಾರಣೆ ಮಾಡಿ ಮುಗಿಸಿ ಎಂಬ ನಿಯಮವಿದೆ.  ಅ ಆದೇಶವನ್ನ ಸರ್ಕಾರ ಪಾಲಿಸುತ್ತಿದೆ. ಆದರೆ ಸಣ್ಣ ಸಣ್ಣ ಘಟನೆಗಳನ್ನ ದೊಡ್ಡದು ಮಾಡಿ ಸರ್ಕಾರ ಮತ್ತು ಗೃಹಸಚಿವರ ವಿರುದ್ದ ಬಿಜೆಪಿ ಪಿತೂರಿ ಮಾಡುತ್ತಿದೆ. ಇದು ಸರಿಯಾದ ಕೆಲಸ ಅಲ್ಲ. ಪೊಲೀಸರ ಆತ್ಮಸ್ಥೈರ್ಯವನ್ನ ಕುಗ್ಗಿಸಬಾರದು . ಕೇವಲ ಟೀಕೆಗೋಸ್ಕರ ಮಾಡುತ್ತಿರುವುದನ್ನ ವಿಪಕ್ಷಗಳು ಕೈಬಿಡಬೇಕು.  ರಾಜ್ಯದಲ್ಲಿ ಶಾಂತಿ ನೆಲಸಲು, ಜನರು ನೆಮ್ಮದಿಯಾಗಿರಲು ಬೇಕಾದ ವಾತಾವರಣವನ್ನ ಸರ್ಕಾರ  ನಿರ್ಮಿಸುತ್ತಿದೆ ಎಂದರು.

Key words: BJP -conspiracy –against- Govt – small incidents -big- H.A Venkatesh-mysore