ಕಾಂಗ್ರೆಸ್ ನಾಯಕರ ವಿರುದ್ಧ ಎಫ್ ಐಆರ್: ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ಗರಂ.

ಬೆಂಗಳೂರು,ಫೆಬ್ರವರಿ,28,2022(www.justkannada.in): ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್  ಪಾದಯಾತ್ರೆ ಕೈಗೊಂಡಿದ್ದು ಈ ಮಧ್ಯೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ ಐಆರ್ ಹಾಕಿರುವುದಕ್ಕೆ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗರಂ ಆಗಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ನಾವು ಪಾದಯಾತ್ರೆ ಮಾಡುತ್ತಿರುವುದು ಸಿಎಂಗೆ ಗೊತ್ತಿತ್ತು. ಅಧಿಕಾರಿಗಳಿಗೂ ಗೊತ್ತು ಅನುಮತಿ ಪಡೆದು ಪಾದಯಾತ್ರೆ ಮಾಡುತ್ತಿದ್ದೇವೆ. ಆದರೆ ಇದೀಗ ಎಫ್ ಐಆರ್ ದಾಖಲು ಮಾಡಿದ್ದಾರೆ.  ರಾಜಕೀಯ ದ್ವೇಷದಿಂದ ಎಫ್ಐ ಆರ್ ದಾಖಲು ಮಾಡಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರಿನಲ್ಲಿ ಫ್ಲೆಕ್ಸ್ ತೆರವುಗೊಳಿಸುವ ಕೆಲಸವಾಗುತ್ತಿದೆ. ನಾವು ಜನರ ಪರ ಹೋರಾಟ ಮಾಡಿದ್ರೆ ಎಫ್ ಐಆರ್  ಹಾಕಿದ್ದಾರೆ. ಸಿದ್ಧರಾಮಯ್ಯ ಡಿಕೆಶಿಯನ್ನ ನೀವು ಸಾಯಿಸಬಹುದು. ಆದ್ರೆ ನನ್ನ ಸಿದ್ಧರಾಮಯ್ಯರಂತಹ ನೂರು ಜನ ಹುಟ್ಟುತ್ತಾರೆ.  ನಾವು ಎಫ್ ಐಆರ್, ಇಂತಹ ಪ್ರಕರಣಗಳಿಗೆ  ಹೆದರಲ್ಲ ಎಂದು ಟಾಂಗ್ ನೀಡಿದರು.

Key words: FIR-against-Congress-leaders-DK Shivakumar