ಇಂದು ಸಂಜೆ ಸಚಿವ ಸಂಪುಟ ರಚನೆ ಬಗ್ಗೆ ಅಂತಿಮ ಚಿತ್ರಣ- ಸಿಎಂ ಬಸವರಾಜ ಬೊಮ್ಮಾಯಿ.

ನವದೆಹಲಿ,ಆಗಸ್ಟ್,2,2021(www.justkannada.in) :  ಇಂದು ಇಂದು ಸಂಜೆ ಸಚಿವ ಸಂಪುಟ ರಚನೆ ಬಗ್ಗೆ ಅಂತಿಮ ಚಿತ್ರಣ ಸಿಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದರು. ಇಂದು ಸಂಜೆ ದೆಹಲಿಯಲ್ಲಿ ಪಕ್ಷದ ಸಭೆ ನಡೆಯಲಿದೆ.  ಸಭೆಯಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸುತ್ತಾರೆ. ಅದಾದ  ಬಳಿಕ ರಾಜ್ಯ ಸಚಿವ ಸಂಪುಟದ ಬಗ್ಗೆ ಮಾಹಿತಿ ಸಿಗಲಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಾಗುವುದು. ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ.  ಈ ವಿಚಾರ ನಮ್ಮ ಶಾಸಕರಿಗೂ ಗೊತ್ತಿದೆ. ಬ್ಯಾಲೆನ್ಸ್ ಮಾಡಿ ಸಂಪುಟ ರಚಿಸಬೇಕಾಗುತ್ತೆ.  ಸಚಿವ ಸಂಪುಟ ರಚನೆ ವೇಳೆ ಪ್ರಾದೇಶಿಕವಾರು ಗಮನದಲ್ಲಿಟುಕೊಂಡು ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಈಗಿರುವ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನು ಸೇರಿಸಿಕೊಂಡು ಹೋಗುವಂತಹ ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ ಎಲ್ಲರೂ ಸೆಕ್ಯೂರ್ ಆಗೋದಕ್ಕೆ ಸಾಧ್ಯವಿಲ್ಲ. ಎಲ್ಲಾ ಪ್ರಾದೇಶಿಕವಾಗಿಯೂ ಚರ್ಚೆ ನಡೆಯಬೇಕಿದೆ. ಈ ಹಿಂದಿನ ಸಚಿವ ಸಂಪುಟದ ಬಗ್ಗೆಯೂ ಗಮನದಲ್ಲಿ ಇಟ್ಟಿಕೊಳ್ಳಬೇಕಿದೆ. ಆ ಎಲ್ಲಾ ನಿಟ್ಟಿನಲ್ಲಿ ಇಂದು ಸಂಜೆ ಚರ್ಚೆ ನಡೆದು, ಸಂಪುಟ ರಚನೆ ಬಗ್ಗೆ ಫೈನಲ್ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ENGLISH SUMMARY….

Will get a final picture about cabinet formation by today evening: CM Bommai
New Delhi, August 2, 2021 (www.justkannada.in): Chief Minister Basavaraj Bommai has informed that he would get a final picture about formation of cabinet by today evening.
Speaking to the media persons about this in New Delhi today he informed that a party meeting will be held today evening in Delhi, where a discussion will be held regarding formation of the cabinet. He explained that a fair decision will be taken. “However everybody cannot become ministers. Even the MLAs know it. Cabinet should be formed with a balance. Regional balance will be kept in mind while forming the cabine,” he added.
Keywords: Chief Minister/ Basavaraj Bommai/ cabinet formation/ New Delhi/ clear picture/ today evening

Key words: Final – cabinet- formation -this evening-CM Basavaraja Bommai