ಮಗಳನ್ನೆ ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ತಂದೆ.

ಬೆಂಗಳೂರು,ಅಕ್ಟೋಬರ್,12,2023(www.justkannada.in):  ಅನ್ಯಜಾತಿಯ ಯುವಕನನ್ನ ಪ್ರೀತಿ ಮಾಡಿದ ಹಿನ್ನೆಲೆ ಮಗಳನ್ನೇ ತಂದೆ ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬಿದಲೂರಿನಲ್ಲಿ ನಡೆದಿದೆ.

20 ವರ್ಷದ ಕವನಾ ಹತ್ಯೆಯಾದ ಯುವತಿ. ಮಂಜುನಾಥ್ ತನ್ನ ಮಗಳನ್ನೆ ಹತ್ಯೆಗೈದ ತಂದೆ. ಮಂಜುನಾಥ್ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಮಗಳು ಕವನ ಬೇರೆ ಜಾತಿಯ ಯುವಕನನ್ನ ಪ್ರೀತಿಸಿದ್ದಕ್ಕೆ ಹತ್ಯೆಗೈದಿದ್ದಾರೆ.

ನಿನ್ನೆ ರಾತ್ರಿ ಮಲಗಿದ್ದ ವೇಳೆ ಮಗಳ ಕತ್ತುಕೊಯ್ದು ಮಂಜುನಾಥ್ ಕೊಲೆಗೈದಿದ್ದು ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ವಿಶ್ವನಾಥಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ

Key words: father – killed – daughter – police station – surrendered.