ಮಗಳ ಸಾವಿನಿಂದ ನೊಂದ ತಂದೆ ಹೃದಯಾಘಾತದಿಂದ ಸಾವು.

0
1

ಮೈಸೂರು,ಮಾರ್ಚ್,20,2022(www.justkannada.in): ಮಗಳ ಸಾವಿನಿಂದ ನೊಂದ ತಂದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಹದೇವಶೆಟ್ಟಿ(46)ಮೃತಪಟ್ಟವರು. ಮಗಳ ಸಾವಿನ ಶಾಕ್ ನಿಂದ ಹೊರಬರಲಾಗದ ತಂದೆ ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಒಂದು ತಿಂಗಳ ಹಿಂದೆ ಮಗಳು ನಂದಿನಿ ಅನುಮಾನಾಸ್ಪದವಾಗಿ ಮೈಸೂರಿನ ಟಿ.ಕೆ.ಲೇಔಟ್ ನಲ್ಲಿ ಮೃತಪಟ್ಟಿದ್ದರು. ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದ  ಮಗಳು ಸಾವನ್ನಪ್ಪಿದ್ದಾಳೆ ಎಂದು ಮಹದೇವಶೆಟ್ಟಿ ದೂರು ನೀಡಿದ್ದರು. ಆದರೆ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಲಿಲ್ಲ ಎಂಬ ಕೊರಗು ಮಹದೇವಶೆಟ್ಟಿ ಅವರಿಗೆ ಇತ್ತು.

ಇಂದು ಬೆಳಿಗ್ಗೆ ಜೆ.ಪಿ.ನಗರದ ಗೊಬ್ಬಳಿಮರದ ಬಳಿ ಅಂಗಡಿ ಮುಂದೆ ಕುಳಿತಿದ್ದ ಮಹದೇವಶೆಟ್ಟಿ ಅವರಿಗೆ  ಹೃದಯಾಘಾತವಾಗಿದ್ದು  ಸಾವನ್ನಪ್ಪಿದ್ದಾರೆ. ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: father -dies – heart -attack.