Saturday, September 19, 2026

BDA Apartments

Farmers BDA JK_Adv BDA Adv
Home Front Page ಸಹಕಾರ ಪದ್ದತಿಯಿಂದ ರೈತರ ಪ್ರಗತಿ: ಸಿಎಂ ಡಿ.ಕೆ ಶಿವಕುಮಾರ್ ಅಭಿಮತ

ಸಹಕಾರ ಪದ್ದತಿಯಿಂದ ರೈತರ ಪ್ರಗತಿ: ಸಿಎಂ ಡಿ.ಕೆ ಶಿವಕುಮಾರ್ ಅಭಿಮತ

ಶಿವಮೊಗ್ಗ, ಸೆಪ್ಟಂಬರ್‌, 19,2026 (www.justkannada.in) “ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ತತ್ವ.‌ ಸಹಕಾರ ಪದ್ದತಿಯಿಂದ ರೈತರ ಪ್ರಗತಿ ಸಾಧ್ಯವಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ತೀರ್ಥಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಅಮೃತ ಮಹೋತ್ಸವವನ್ನು ಶನಿವಾರ ಉದ್ಘಾಟಿಸಿ  ಸಿಎಂ ಡಿಕೆ ಶಿವಕುಮಾರ್‌ ಮಾತನಾಡಿದರು.

“ನನಗೂ ಸಹಕಾರಿ ಚಳುವಳಿಗೂ ಅವಿನಾಭಾವ ಸಂಬಂಧ. ರಾಮಕೃಷ್ಣ ಹೆಗಡೆ ಅವರು 1983ರಲ್ಲಿ ಕನಕಪುರ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾದರು. ಆಗ ನನಗೆ 22 ವರ್ಷ. ಆಗ ನಾನೂ ಟಿಎಪಿಸಿಎಂಸ್ ಚುನಾವಣೆಗೆ ಸಾಮಾನ್ಯ ಕ್ಷೇತ್ರದಿಂದ ನಿಂತು ಗೆದ್ದಿದ್ದೆ.‌ ಆದರೂ ನಾನು ಟಿಎಪಿಸಿಎಂಎಸ್ ಕಾರ್ಯಕ್ರಮಕ್ಕೆ ಹೋದವನಲ್ಲ. ಶಾಸಕರಾದ ಅರಗ ಜ್ಞಾನೇಂದ್ರ ಅವರ ಒತ್ತಾಯದ ಮೇರೆಗೆ ಇಲ್ಲಿದೆ ಬಂದೆ” ಎಂದರು.Farmers dks dks 7

“ಕಬ್ಬಿನ ಕಾರ್ಖಾನೆಗಳು ಸಹಕಾರಿ ಪದ್ದತಿಯಲ್ಲಿ ‌ನಡೆದು ರೈತರನ್ನು ಕಾಪಾಡಿವೆ. ಮಲೆನಾಡು ಭಾಗದಲ್ಲಿ ಬಸ್, ಆಸ್ಪತ್ರೆ, ಬ್ಯಾಂಕ್ ಗಳು ಸಹಕಾರಿ ಪದ್ದತಿಯಲ್ಲಿ ನಡೆಯುತ್ತಿವೆ. ಇದು ಈ ಭಾಗದ ಹೆಗ್ಗಳಿಕೆ. ಟಿಎಪಿಸಿಎಂಎಸ್ 75 ವರ್ಷ ಆಚರಿಸುತ್ತಿದೆ. ಒಂದು ಸಂಸ್ಥೆ ಇಷ್ಟು ವರ್ಷಗಳ ಕಾಲ ಉಳಿಯುವುದು ಕಷ್ಟ.‌ ಅದನ್ನು ತೀರ್ಥಹಳ್ಳಿ ಟಿಎಪಿಸಿಎಂಎಸ್ ಸುಳ್ಳಾಗಿಸಿದೆ.‌ ಇಲ್ಲಿನ ಆಡಳಿತ ಮಂಡಳಿಗೆ ಅಭಿನಂದನೆಗಳು” ಎಂದರು.progress jk02_new jk02 new

“ಮಲೆನಾಡು ಭಾಗಕ್ಕೆ ಹೊಸ ಪ್ರವಾಸೋದ್ಯಮ ನೀತಿ, ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು ಎಂದು ಘೋಷಣೆ ಮಾಡಲಾಗಿದೆ. ಹೀಗೆ ಅನೇಕ ಐಸಿಹಾಸಿಕ ನಿರ್ಣಯಗಳನ್ನು ಕರಾವಳಿ ಭಾಗದಲ್ಲಿ ಸಚಿವ ಸಂಪುಟ ನಡೆಸಿ ನಮ್ಮ‌ ಸರ್ಕಾರ ತೆಗೆದುಕೊಂಡಿದೆ. ಮಲೆನಾಡು ಭಾಗವನ್ನು ಉಳಿಸುವ ಬಗ್ಗೆ ಜನರ ಅಭಿಪ್ರಾಯ ಪಡೆದು ತೀರ್ಮಾನ, ಚರ್ಚೆ ಮಾಡೋಣ” ಎಂದರು.

 

English Summary
Title

D.K. Shivakumar on How Cooperative Systems Empower Farmers

Short Description
Karnataka Chief Minister D.K. Shivakumar recently highlighted the vital role of the cooperative system in driving farmers' progress and agricultural growth. Speaking in Shivamogga, he shared a progressive roadmap for sustainable development, stating, "Coming together is a beginning, thinking together is progress, and working together is success." Shivakumar emphasized that this cooperative framework is the ultimate driving force for rural empowerment. By fostering collaboration and collective strength, the cooperative model secures long-term economic stability and success for the farming community.
Keywords
Farmers, progress, cooperative system, CM D.K. Shivakumar