Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Crime ಮೈಕ್ರೋ ಫೈನಾನ್ಸ್ ಕಿರುಕುಳ: ರೈತ ಆತ್ಮಹತ್ಯೆಗೆ ಶರಣು

ಮೈಕ್ರೋ ಫೈನಾನ್ಸ್ ಕಿರುಕುಳ: ರೈತ ಆತ್ಮಹತ್ಯೆಗೆ ಶರಣು

ಹಾಸನ,ಫೆಬ್ರವರಿ,3,2025 (www.justkannada.in): ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವವರು ಹೆಚ್ಚುತ್ತಿದ್ದು ಇದೀಗ ಹಾಸನ ಜಿಲ್ಲೆಯಲ್ಲಿ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.ಮೈಕ್ರೋ ಫೈನಾನ್ಸ್ ಕಿರುಕುಳ: ರೈತ ಆತ್ಮಹತ್ಯೆಗೆ ಶರಣು nypunya1

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಕಂಟೇನಹಳ್ಳಿ ಗ್ರಾಮದ ರೈತ ರವಿ(50) ಆತ್ಮಹತ್ಯೆಗೆ ಶರಣಾದವರು. ರೈತ ರವಿ ವಿವಿಧ ಸಂಘಗಳಲ್ಲಿ ಸಾಲ ಮಾಡಿದ್ದರು. ಈ ಮಧ್ಯೆ ಸಾಲ ಮರುಪಾವತಿಸುವಂತೆ ಫೈನಾನ್ಸ್ ಗಳಿಂದ ಒತ್ತಡ ಬಂದಿದ್ದು ಜೊತೆಗೆ ಶುಂಠಿ ಬೆಲೆ ಕುಸಿತವಾಗಿದ್ದ ಹಿನ್ನೆಲೆಯಲ್ಲಿ ಮನನೊಂದು ರವಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಸರ್ಕಾರ ಸುಗ್ರೀವಾಜ್ಞೆಗೆ ಮುಂದಾದರೂ ಸಹ ಆತ್ಮಹತ್ಯೆಗಳ ಸರಣಿ ಮುಂದುವರೆದಿದೆ.

Key words: Microfinance, harassment, Farmer, commits suicide