Thursday, September 17, 2026

BDA Apartments

ಮೈಸೂರಿನಲ್ಲಿ ಹುಲಿ ದಾಳಿಗೆ ರೈತ ಬಲಿ: ಅಪರಿಚಿತ ವಾಹನ ಡಿಕ್ಕಿ ಚಿರತೆ ಸಾವು BDA JK_...
Home Crime ಮೈಸೂರಿನಲ್ಲಿ ಹುಲಿ ದಾಳಿಗೆ ರೈತ ಬಲಿ: ಅಪರಿಚಿತ ವಾಹನ ಡಿಕ್ಕಿ ಚಿರತೆ ಸಾವು.

ಮೈಸೂರಿನಲ್ಲಿ ಹುಲಿ ದಾಳಿಗೆ ರೈತ ಬಲಿ: ಅಪರಿಚಿತ ವಾಹನ ಡಿಕ್ಕಿ ಚಿರತೆ ಸಾವು.

ಮೈಸೂರು,ಜನವರಿ,22,2022(www.justkannada.in): ಹಸು ಮೇಯಿಸುವಾಗ ಏಕಾಏಕಿ ಹುಲಿ ದಾಳಿಯಿಂದಾಗಿ ರೈತ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಹೆಚ್ ಡಿ ಕೋಟೆ ತಾಲ್ಲೂಕು ಕೋತನಹಳ್ಳಿ ಗ್ರಾಮದಲ್ಲಿ ಈ  ಘಟನೆ ನಡೆದಿದೆ.  ಮರಿಗೌಡ (61) ಮೃತ ರೈತ. ಹಸು‌ ಮೇಯಿಸಲು ಹೋಗಿದ್ದಾಗ ಘಟನೆ ಈ ನಡೆದಿದೆ. ಹಸು ಮೇಯಿಸುವಾಗ ಏಕಾ‌ ಏಕಿ ಹುಲಿ ದಾಳಿ ಮಾಡಿದ್ದು ಈ ವೇಳೆ ಮರಿಗೌಡ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಕಳೆದ ಹಲವು ದಿನಗಳಿಂದ ಹುಲಿ ದಾಳಿ ಮಾಡುತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ ಚಿರತೆ ಸಾವು.

ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿರುವ ಘಟನೆ ಹುಣಸೂರು-ಪಿರಿಯಪಟ್ಟಣ ರಸ್ತೆಯ ನಾಗಮಂಗಲ ಗ್ರಾಮದ ಬಳಿ ನಡೆದಿದೆ.  ನಾಗಮಂಗಲ ಸಾಮಾಜಿಕ ಅರಣ್ಯ ಪ್ರದೇಶವಾಗಿದ್ದು, ಮೃತ ಚಿರತೆ ಬಳಿ ಜಮಾಯಿಸಿದ್ದ ಜನರು, ಮೃತ ಚಿರತೆ ಪೋಟೋ ತೆಗೆಯಲು ಪೈಪೋಟಿ ನಡೆಸಿ ಚಿರತೆ ಉಗುರು ತೆಗೆದುಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Farmer-death- tiger -attack -Mysore