Monday, September 28, 2026

BDA Apartments

ಹುಣಸೂರು ತಾಲೂಕಿನಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ BDA JK_Adv BDA Adv
Home Crime ಹುಣಸೂರು ತಾಲೂಕಿನಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಹುಣಸೂರು ತಾಲೂಕಿನಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಮೈಸೂರು, ಮೇ 13, 2020 (www.justkannada.in): ಹುಣಸೂರು ತಾಲೂಕಿನಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರು ಗ್ರಾಮದ ನಿವಾಸಿ. ಸಿದ್ದಲಿಂಗಪ್ಪ ಪುತ್ರ ಸುರೇಶ್ (45) ಮೃತರು. ಸಂಬಂಧಿಕರಿಂದ ಕೈಸಾಲ ತೆಗೆದುಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಗೆ ಹೋಗಿದ್ದ ಸುರೇಶ್. 4 ದಿನವಾದರೂ ಮನೆಗೆ ಬಂದಿರಲಿಲ್ಲ. ಇಂದು ಬೈಲಕೊಪ್ಪ ಹತ್ತಿರ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹುಣಸೂರಿನ ಎಚ್‌ಡಿಎಫ್‌ಸಿಯಲ್ಲಿ ಶಾಖೆಯಲ್ಲಿ ಟ್ಯಾಕ್ಟರ್ ಸಾಲ, ಐದು ಲಕ್ಷ ರೂ. ಬ್ಯಾಂಕ್ ಸಾಲ ಇತ್ತು. ಸಾಲದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.