ಹತ್ರಾಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ : ಸಂತ್ರಸ್ತೆ ಕುಟುಂಬ ಕೋರ್ಟ್ ಗೆ ಹಾಜರು…

ಬೆಂಗಳೂರು,ಅಕ್ಟೋಬರ್,12,2020(www.justkannada.in) : ಉತ್ತರ ಪ್ರದೇಶದ ಹಾಥರಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಸಂಬಂಧಿಸಿದಂತೆ ಅತ್ಯಾಚಾರಕ್ಕೊಳಗಾದ ಯುವತಿ ಕುಟುಂಬಸ್ಥರನ್ನು ಬಿಗಿ ಭದ್ರತೆಯ ನಡುವೆ ಅಲಹಾಬಾದ್ ಹೈ ಕೋರ್ಟ್ ನ ಲಖನೌ ಪೀಠದ ಎದುರು ಹಾಜರು ಪಡಿಸಲಾಗಿದೆ.jk-logo-justkannada-logo

ಘಟನೆಯ ಕುರಿತು ತಮ್ಮ ಹೇಳಿಕೆ ನೀಡುವಂತೆ ಅಕ್ಟೋಬರ್ 1ರಂದು ನ್ಯಾಯಾಲಯ ಸಂತ್ರಸ್ತೆಯ ಕುಟುಂಬದವರಿಗೆ ತಿಳಿಸಿತ್ತು. ಜತೆಗೆ, ಸಂತ್ರಸ್ತೆಯ ಕುಟುಂಬದವರು ನ್ಯಾಯಾಲಯದ ಎದುರು ಹಾಜರಾಗಲು ಬೇಕಾದ ಪ್ರಯಾಣದ ವ್ಯವಸ್ಥೆ ಮಾಡಿಕೊಡುವಂತೆ ಹಾಥರಸ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.

ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಿ ರಾತ್ರಿಯಲ್ಲಿ ಪ್ರಯಾಣಿಸಲು ನಿರಾಕರಿಸಿದ್ದ ಸಂತ್ರಸ್ತೆಯ ಕುಟುಂಬದ ಸದಸ್ಯರು ಬೆಳಗ್ಗೆ ಲಖನೌ ಗೆ ತೆರಳಿದ್ದಾರೆ. ಸಂತ್ರಸ್ತೆಯ ತಂದೆ, ತಾಯಿ ಮತ್ತು ಮೂವರು ಸಹೋದರರು ಹಾಥರಸ್ ನಿಂದ ಲಖನೌಗೆ ತೆರಳಿದ್ದಾರೆ.  ಇವರೊಂದಿಗೆ ಮ್ಯಾಜಿಸ್ಟ್ರೇಟ್ ಅಂಜಲಿ ಗಂಗ್ವಾರ್ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಇದ್ದಾರೆ ಎಂದು ಪ್ರಕರಣದ ನೋಡಲ್ ಅಧಿಕಾರಿ ಡಿಐಜಿ ಶಲಾಬ್ ಮಾಥೂರ್ ಮಾಹಿತಿ ನೀಡಿದ್ದಾರೆ.

family-young-woman-raped-Hathers-Opposite- Lucknow-bench-tight-security

ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ರಾಜನ್ ರಾಯ್ ಅವರ ವಿಭಾಗೀಯ ಪೀಠದ ಎದುರು ಪ್ರಕರಣ ವಿಚಾರಣೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

key words : family-young-woman-raped-Hathers-Opposite- Lucknow-bench-tight-security