ಮುರುಘಾ ಶ್ರೀಗಳ ವಿರುದ್ಧ ಸುಳ್ಳು  ದೂರು ದಾಖಲಿಸಿದ್ದಾರೆ- ಮಠದ ಪರ ವಕೀಲ ವಿಶ್ವನಾಥಯ್ಯ.

ಚಿತ್ರದುರ್ಗ,ಆಗಸ್ಟ್,27,2022(www.justkannada.in):  ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದ ಡಾ. ಮುರುಘಾ ಶರಣರ ವಿರುದ್ಧ ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ಆರೋಪ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಮುರುಘಾ ಮಠದ ಪರ ವಕೀಲ ವಿಶ್ವನಾಥಯ್ಯ, ಮುರುಘಾ ಶ್ರೀಗಳ ವಿರುದ್ಧ ಸುಳ್ಳು  ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ವಕೀಲ ವಿಶ್ವನಾಥಯ್ಯ, ಮಠದ ವಿರೋಧಿ ಶಕ್ತಿಗಳಿಂದ ಶ್ರೀಗಳ ವಿರುದ್ಧ ದೂರು ದಾಖಲಾಗಿದೆ.  ಮುರುಘಾಶ್ರೀ ವಿರುದ್ದ ಸೂಳ್ಳು ದೂರು ದಾಖಲಾಗಿದೆ.  ಬಾಲಕಿಯರ ತಲೆ ಕೆಡಿಸಿ ಶ್ರೀಗಳ ವಿರುದ್ಧ  ದೂರು ನೀಡಲಾಗಿದೆ.  ಈ ಬಗ್ಗೆ ಮುರುಘಾ ಶ್ರೀಗಳೇ ನಮ್ಮ ಬಳಿ ಹೇಳಿದ್ದಾರೆ. ಸುಳ್ಳು ದೂರು ನೀಡುರುವವರು ವಾಪಸ್ ಪಡೆಯಲಿ.  ಪ್ರಕರಣದ ಬಗ್ಗೆ ಕಾನೂನು ಹೋರಾಟ ಮಾಡಲಾಗುವುದು ಎಂದು ವಿಶ್ವನಾಥಯ್ಯ ಹೇಳಿದ್ದಾರೆ.

Key words: false complaint – filed -against – Murugashri – lawyer – Vishwanathaiah,