Thursday, September 10, 2026

BDA Apartments

Home Crime ನಕಲಿ ನೋಟು ಮುದ್ರಿಸಿ ಚಲಾವಣೆ ಆರೋಪ: ಅಪ್ಪ ಮಗ ಅರೆಸ್ಟ್

ನಕಲಿ ನೋಟು ಮುದ್ರಿಸಿ ಚಲಾವಣೆ ಆರೋಪ: ಅಪ್ಪ ಮಗ ಅರೆಸ್ಟ್

ಮೈಸೂರು,ಜನವರಿ,22,2025 (www.justkannada.in): ನಕಲಿ ನೋಟು‌ ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಮೈಸೂರು ಜಿಲ್ಲೆ ಟಿ ನರಸೀಪುರ ಠಾಣಾ ಪೋಲೀಸರು ಬಂಧಿಸಿದ್ದಾರೆ.

ನಾಗೇಶ್ (27) ಪ್ರಸಾದ್ (53) ಬಂಧಿತ ಆರೋಪಿಗಳು. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಗಳಿಂದ ಸುಮಾರು 25 ಸಾವಿರ ಮೌಲ್ಯದ ನಕಲಿ ನೋಟು ಒಂದು ಪ್ರಿಂಟರ್  ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಂದೆ ಮಗ ಇಬ್ಬರು ತಮ್ಮದೇ ಜಮೀನಿನ ಶೆಡ್ ನಲ್ಲಿ ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದರು. ಇಸ್ಪೀಟ್ ಆಟ ಆಡುವಾಗ ಹೆಚ್ಚಾಗಿ ನಕಲಿ ನೋಟು ಬಳಕೆಯಾಗಿದ್ದು ಕಂಡು ಬಂದಿದ್ದು, ಈ ಕುರಿತು ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Father, son, arrested, printing,  fake currency