ಮಾಸ್ಕ್ ತಪಾಸಣೆ ಹೆಸರಲ್ಲಿ ಸುಲಿಗೆ: ಅಧಿಕಾರಿಗಳನ್ನ ಬಿಟ್ಟು ಸರ್ಕಾರದಿಂದ ರೋಲ್‌ಕಾಲ್- ಶಾಸಕ ಸಾ.ರಾ ಮಹೇಶ್ ಕಿಡಿ…

ಮೈಸೂರು, ನವೆಂಬರ್,28,2020(www.justkannada.in): ನಿತ್ಯವೂ ಮಾಸ್ಕ್ ಹಾಗೂ ತಪಾಸಣೆ ಹೆಸರಲಿ ಸುಲಿಗೆ ನಡೆಯುತ್ತಿದೆ. ಸರ್ಕಾರ ಅಧಿಕಾರಿಗಳನ್ನ ಬಿಟ್ಟು ರೋಲ್‌ಕಾಲ್ ಮಾಡಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಾ.ರಾ ಮಹೇಶ್ ಕಿಡಿಕಾರಿದರು.I didn't knew CM BSY will think so cheaply - KPCC President D.K. Shivakumar

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಸಾ.ರಾ ಮಹೇಶ್,  ನಿತ್ಯವೂ ಮಾಸ್ಕ್ ಹಾಗೂ ತಪಾಸಣೆ ಹೆಸರಲಿ ಸುಲಿಗೆ ನಡೆಯುತ್ತಿದೆ. ಸರ್ಕಾರ ಪೊಲೀಸರಿಗೆ ನೀಡಿರುವ ಈ ಟಾರ್ಗೆಟ್ ಹಿಂಪಡೆಯಬೇಕು. ಗೃಹ ಸಚಿವರು ಐಜಿಪಿಗೆ ಇದನ್ನ ನಿಲ್ಲಿಸಲು ಸೂಚನೆ ಕೊಡಬೇಕು. ಇದು ಒಂದು ರೀತಿ ಲೆಸೈನ್ಸ್ ಇಟ್ಟುಕೊಂಡು ರೋಲ್‌ಕಾಲ್ ಮಾಡುವ ರೀತಿಯಾಗಿದೆ. ಕೂಲಿ ಕೆಲಸ ಮಾಡುವವರಿಗೆ 500ರೂ ದಂಡ ವಿಧಿಸಿದ್ರೆ ಹೇಗೆ..? ಅವ್ರು ದುಡಿಯುವ ದುಡ್ಡು ನಿಮಗೆ ದಂಡ ಕಟ್ಟಿ ಹೋಗಬೇಕಾ..? ಎಂದು ಪ್ರಶ್ನಿಸಿದರು. ಸಾರ್ವಜನಿಕರಿಗೆ ಹಾಗೂ ಕೂಲಿ ಮಾಡುವವರಿಗೆ ಇದು ಸಮಸ್ಯೆಯಾಗಿದೆ. ಈಗಾಗಲೇ ಕರೋನಾದಿಂದ ಜನರು ಸಾಕಷ್ಟು ನೊಂದಿದ್ದಾರೆ. ಹಾಗಾಗಿ ಈ ಮಾಸ್ಕ್ ದಂಡ ಹಾಗೂ ತಪಾಸಣೆಯನ್ನ ನಿಲ್ಲಿಸಬೇಕು. ಎಂದು ಆಗ್ರಹಿಸಿದರು.

ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿ: ಹಕ್ಕು ಚ್ಯುತಿ ಮಂಡಿಸುವೆ…

ಹಾಗೆಯೇ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಶಾಸಕ ಸಾ.ರಾ ಮಹೇಶ್, ನೀವೂ ನಿಮ್ಮ ತಹಸೀಲ್ದಾರ್ ದಿನಾಂಕ ನಿಗದಿ ಮಾಡಿದ್ರೆ. ಶಾಸಕರು ಆ‌ ಕೂಡಲೇ ಬಂದುಬಿಡ್ತಾರಾ.? ಎಂದು ಪ್ರಶ್ನಿಸಿದರು.

ಇದನ್ನ ಡಿ.7ರ ವಿಧಾಸಭೆಯಲ್ಲಿ ಮಾತಾಡ್ತಿನಿ. ಕೆಡಿಪಿ ಸಭೆಯಲ್ಲಿ ನೀವೂ ಉತ್ತರ ಕೊಡುವವರು. ನೀವ್ಯಾಕೆ ಮೇಲೆ ಕುಳಿತುಕೊಂಡ್ರಿ.? ಕೆಳಗೆ ಕುಳಿತೆ ಉತ್ತರ ಕೊಡಬೇಕಿತ್ತು.? ಇದನ್ನು ಕೂಡ ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪ ಮಾಡ್ತಿನಿ. ನಮಗೂ ಕೂಡ ದಿನಕ್ಕೆ 30 ಮದುವೆ ಇತರೆ ಕಾರ್ಯಕ್ರಮ ಇರುತ್ತೆ. ಆದರೆ ಒಳ್ಳೆ ಕೆಲಸ ಮಾಡುವಾಗ ನಾವು ಕೂಡ ಅದಕ್ಕೆ ಜೊತೆಯಾಗ್ತಿವಿ. ಆದರೆ ನಮಗೆ ಮಾಹಿತಿ ನೀಡದೆ ಕಾರ್ಯಕ್ರಮ ಮಾಡಿದ್ರೆ ಹೇಗೆ.? ಎಂದು ಹರಿಹಾಯ್ದರು.

ನಾನು ತುಂಬಾ ಜನ ಡಿಸಿಗಳನ್ನು ನೋಡಿದ್ದೇನೆ. ಯಾರು ಈ ರೀತಿ ಮಾಡಿರಲಿಲ್ಲ. ನಾನು ಈ ಬಗ್ಗೆ ಹಕ್ಕು ಚ್ಯುತಿ ಮಂಡಿಸುತ್ತೇನೆ. ಸದನದಲ್ಲಿ ನಾನು ಈ ಬಗ್ಗೆ ಹಕ್ಕು ಚ್ಯುತಿ ಮಂಡಿಸುತ್ತೇನೆ ಎಂದರು.extortion-mask-checking-government-rollcall-officers-sara-mahesh

ಮೈಸೂರು ರೇಸ್ ಕೋರ್ಸ್ ಗೆ ಸರ್ಕಾರಿ ಜಾಗವನ್ನು ಮತ್ತೆ ನವೀಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೋಟಿಸ್ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಸಾ.ರಾ ಮಹೇಶ್,  ಮೈಸೂರಿನ ರೇಸ್ ಕೋರ್ಸ್ ವಿಚಾರದಲ್ಲಿ ನಾನು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಯಾರೋ ಪುಣ್ಯಾತ್ಮ ಪಿಐಎಲ್ ಸಲ್ಲಿಸಿದ್ದಾರೆ. ನಾನು ಕೂಡಾ ಅದಕ್ಕೆ ಕೈಜೋಡಿಸುತ್ತೇನೆ. ರೇಸ್ ಕೋರ್ಸ್ ‌ನಲ್ಲಿ ರೇಸ್  ನಡೆಸಲು ಮಾತ್ರ ಅನುಮತಿ ಇದೆ. ಕುದುರೆಗಳನ್ನು ಸಾಕಲು ಅನುಮತಿ ಇಲ್ಲ ಎಂದರು.

Key words: Extortion – mask –checking-Government Rollcall- Officers-sara Mahesh