Saturday, August 22, 2026

BDA Apartments

Home Crime ಅಕ್ರಮ ಹಣ ಸಂಪಾದನೆ: ಅಬಕಾರಿ ಉಪನಿರೀಕ್ಷಕನಿಗೆ ಕಠಿಣ ಶಿಕ್ಷೆ, 50 ಲಕ್ಷ ರೂ. ದಂಡ

ಅಕ್ರಮ ಹಣ ಸಂಪಾದನೆ: ಅಬಕಾರಿ ಉಪನಿರೀಕ್ಷಕನಿಗೆ ಕಠಿಣ ಶಿಕ್ಷೆ, 50 ಲಕ್ಷ ರೂ. ದಂಡ

ಬೆಂಗಳೂರು ಗ್ರಾಮಾಂತರ, ನವೆಂಬರ್, 15,2024 (www.justkannada.in): ಅಕ್ರಮ ಹಣ ಸಂಪಾದನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಬಕಾರಿ ಉಪನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, 50 ಲಕ್ಷ ದಂಡ ವಿಧಿಸಲಾಗಿದೆ.

ಬೆಂಗಳೂರು ನಗರ ಜೆ.ಸಿ. ರಸ್ತೆಯ ಡೆಪ್ಯೂಟಿ ಕಮಿಷನ್ ಆಪ್ ಎಕ್ಸ್ಪ್ರೆಸ್ ನಲ್ಲಿ ಅಬಕಾರಿ ಉಪ ನಿರೀಕ್ಷಕರಾಗಿದ್ದ ಎಂ.ರಾಮಚಂದ್ರ ಇವರು ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ನ್ಯಾಯಾಧೀಶ ಸತೀಶ್ ಜೆ.ಬಾಲಿ ಅವರು ಆಪಾದಿತರಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ 50 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳ ಶಿಕ್ಷೆ ವಿಧಿಸಿದ್ದಾರೆ.

ಎಂ.ರಾಮಚಂದ್ರ ಅವರು ಆರಂಭದಲ್ಲಿ ಇಲಾಖೆಗೆ ಅಬಕಾರಿ ಗಾರ್ಡ್ ಆಗಿ ಸೇವೆಗೆ ಸೇರಿದ್ದು, ಪ್ರಸ್ತುತ ಅವರ ಆಸ್ತಿ 171 ಪಟ್ಟು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಸೋರ್ಸ್ ಮೇರೆಗೆ ಪೊಲೀಸ್ ಅಧೀಕ್ಷಕ  ಡಿ.ಟಿ.ಶ್ರೀನಿವಾಸ್ ಅವರು ಪ್ರಕರಣ ದಾಖಲಿಸಿದ್ದರು, ಪ್ರಕರಣ ಸಂಬಂಧ  53 ಸಾಕ್ಷಿದಾರರು ಮತ್ತು 559 ದಾಖಲಾತಿಗಳನ್ನು ಹಾಜರುಪಡಿಸಲಾಗಿತ್ತು.

ಪೊಲೀಸ್ ಅಧೀಕ್ಷಕರ ಆದೇಶದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಡಾ.ಎಸ್.ಪ್ರಕಾಶ್ ಹಾಗೂ ಗೌತಮ್ ತನಿಖೆ ನಡೆಸಿದ್ದರು.

Key words: Excise,  sub-inspector, imprisonment, Rs 50 lakh,  fine