ಅಬಕಾರಿ ಇಲಾಖೆ ಲೈಸೆನ್ಸ್‌ “ ಇ-ಹರಾಜು “ : ಸಂಭಾವ್ಯ ಬಿಡ್ಡುದಾರರಿಗೆ ಜ. 06 ರಂದು ತರಬೇತಿ.

The live auction process for Mysore Rural Division will be held on January 17 from 3 pm to 5 pm. The live auction process for Mysore Urban Division will be held on January 20 from 3 pm to 5 pm. Bidders will be eligible to participate in the online auction only after the registration process is completed and payment is confirmed online.

 

ಮೈಸೂರು, ಡಿ.29 :- ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ / ಮಂಜೂರಾಗದೇ ಬಾಕಿ ಉಳಿದಿರುವ ಸನ್ನದುಗಳನ್ನು ಭಾರತ ಸರ್ಕಾರದ ಸ್ವಾಮ್ಯದ ಸಂಸ್ಥೆಯಾದ MSTC ಲಿಮಿಟಡ್ನ ಇ ಪೋರ್ಟಲ್ನಲ್ಲಿ ಇ-ಹರಾಜು ಮಾಡಲು ವೆಬ್ಸೈಟ್ https://www.mstcecommerce.comಮೂಲಕ ಅರ್ಹ ಬಿಡ್ಡರ್ಗಳಿಂದ ಬಿಡ್ಡುಗಳನ್ನು ಆಹ್ವಾನಿಸಲಾಗಿದೆ.

ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ (LOA) ನೀಡುವ ವರ್ಷವನ್ನೂ ಒಳಗೊಂಡoತೆ ಐದು ಅಬಕಾರಿ ವರ್ಷಗಳ ಅವಧಿಗೆ ಅನ್ವಯಿಸುತ್ತದೆ.

ಕರ್ನಾಟಕ ರಾಜ್ಯದ್ಯಾಂತ ಒಟ್ಟು 569 ಸನ್ನದುಗಳನ್ನು ಇ-ಹರಾಜು ಮಾಡಲು ಉದ್ದೇಶಿಸಿದ್ದು. ಮೈಸೂರು  ಜಿಲ್ಲೆಗೆ ಒಟ್ಟು 23 CL-2A ಹಾಗೂ 4 CL – 94 ಸನ್ನದುಗಳನ್ನು ಹಂಚಿಕೆ ಮಾಡಿರುತ್ತಾರೆ. ಡಿಸೆಂಬರ್ 22 ರಿಂದ ಬಿಡ್ಡುದಾರರ ನೋಂದಣಿ ಪ್ರಕ್ರಿಯೆ ಅನ್ಲೈನ್ನಲ್ಲಿ ಪ್ರಾರಂಭವಾಗಿರುತ್ತದೆ. ಅರ್ಜಿದಾರರು ನೊಂದಣಿ ಶುಲ್ಕ ರೂ.1,000/- ಹಾಗೂ ಜಿ.ಎಸ್.ಟಿ ರೂ.180/- ಗಳನ್ನು ಪಾವತಿಸಬೇಕು ಹಾಗೂ ಪ್ರತಿ ಸನ್ನದಿಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕ ರೂ.50,000/- ಗಳು ಹಾಗೂ EMD ಗಳನ್ನು ಅನ್ಲೈನ್ ನಲ್ಲಿ ಪಾವತಿಸಬೇಕು.

ಮೈಸೂರು ಗ್ರಾಮಾಂತರ ವಿಭಾಗಕ್ಕೆ ನೇರ ಹರಾಜು ಪ್ರಕ್ರಿಯೆ ಜನವರಿ 17 ರಂದು ಮಧ್ಯಾಹ್ನ 3 ರಿಂದ 5 ಗಂಟೆಗೆಯವರೆಗೆ ನಡೆಯಲಿದೆ. ಮೈಸೂರು ನಗರ ವಿಭಾಗಕ್ಕೆ ನೇರ ಹರಾಜು ಪ್ರಕ್ರಿಯೆಜನವರಿ 20 ರಂದು ಮಧ್ಯಾಹ್ನ 03 ಗಂಟೆಯಿಂದ 05 ಗಂಟೆಯವರೆಗೆ ನಡೆಯಲಿದೆ.

ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ಆನ್ಲೈನ್ ಮೂಲಕ ಹಣ ಪಾವತಿಗೆ ಖಚಿತವಾದ ನಂತರವೇ ಬಿಡ್ಡರ್ಗಳು ಆನ್ಲೈನ್ ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಮೈಸೂರು ಜಿಲ್ಲಾ ಸಂಭಾವ್ಯ ಬಿಡ್ಡುದಾರರಿಗೆ ದಿನಾಂಕ : 06-01-2026 ರಂದು ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ Hotel Ruchi The Prince, 986/624, Mysuru-Hunsur Main Road, Hinkal Mysuru-17  ಇಲ್ಲಿ ಒಂದು ದಿನದ ತರಬೇತಿಯನ್ನು ಆಯೋಜಿಸಲಾಗಿರುತ್ತದೆ.

ಮಾನ್ಯ ಅಬಕಾರಿ ಆಯುಕ್ತರು ಹೊರಡಿಸಿರುವ ತರಬೇತಿ ವೇಳಾಪಟ್ಟಿಯನ್ನು ಅಬಕಾರಿ ಇಲಾಖಾ ವೆಬ್ಸೈಟ್ https:stateexcise.karnataka.gov.in  ಮತ್ತು ಎಂ.ಎಸ್.ಟಿ.ಸಿ. ಇ-ಹರಾಜು ಪೋರ್ಟಲ್ https:www.msleecommerce.com  ನಲ್ಲಿ ಲಭ್ಯವಿರುತ್ತದೆ.

ಮೈಸೂರು ಜಿಲ್ಲೆಗೆ ಹಂಚಿಕೆಯಾದ 23 CL – 24 ಹಾಗೂ 4 CL – 9A ಸನ್ನದುಗಳ ಮೂಲ ಬೆಲೆ ಹಾಗೂ EMD ಮೊತ್ತ ಹಾಗೂ ಹೆಚ್ಚಿನ ಮಾಹಿತಿಗಾಗಿ  ಡೆಪ್ಯೂಟೀವ್ ಕಮಿಷನರ್ ಆಫ್ ಎಕ್ಸೈಸ್ ರವರ ಕಛೇರಿ ಮೈಸೂರು ನಗರ ಜಿಲ್ಲೆ ಅಬಕಾರಿ ಉಪ ಆಯುಕ್ತರು ಟಿ ಎಸ್ ನಾಗರಾಜಪ್ಪ – 9449597178, ಡೆಪ್ಯೂಟೀವ್ ಕಮಿಷನರ್ ಆಫ್ ಎಕ್ಸೈಸ್ ರವರ ಕಛೇರಿ ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಉಪ ಆಯುಕ್ತರಾದ ಡಾ. ಮಹದೇವಿಬಾಯಿ – 9449597184, ಅಬಕಾರಿ ಉಪ ಆಧೀಕ್ಷಕರ ಕಚೇರಿ, ಮೈಸೂರು ಉಪ ವಿಭಾಗ ಅಬಕಾರಿ ಉಪ ಅಧಿಕರಾದ ಎಚ್ ಕೆ ರಮೇಶ್ – 9449721835, ಅಬಕಾರಿ ಉಪ ಅಧೀಕ್ಷಕರ ಕಛೇರಿ, ನಂಜನಗೂಡು  ಉಪ ವಿಭಾಗ ಅಬಕಾರಿ ಉಪ ಅಧಿಕರಾದ ನಟರಾಜು – 9448879969, ಹುಣಸೂರು ಅಬಕಾರಿ ಉಪ ಅಧೀಕ್ಷಕರ ಕಚೇರಿ ಹುಣಸೂರು, ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕಾರದ 9980556053 ನ್ನು ಸಂಪರ್ಕಿಸಬಹುದು ಎಂದು ಮೈಸೂರು ಗ್ರಾಮಾಂತರ ಜಿಲ್ಲೆಯ, ಡೆಪ್ಯುಟಿ ಕಮಿಷನರ್ ಆಫ್  ಎಕ್ಸೈಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words: Excise Department, License “E-Auction”, Training, potential bidders, on Jan. 06. Mysore.

SUMMARY:

Excise Department License “E-Auction”: Training for potential bidders on Jan. 06.

The live auction process for Mysore Rural Division will be held on January 17 from 3 pm to 5 pm. The live auction process for Mysore Urban Division will be held on January 20 from 3 pm to 5 pm. Bidders will be eligible to participate in the online auction only after the registration process is completed and payment is confirmed online.