ಸಂಜೆ ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆ: ಬೆಳಗಾವಿಯಲ್ಲಿ ಅಂತಿಮದರ್ಶನಕ್ಕೆ ಸಿದ್ಧತೆ.

ಬೆಳಗಾವಿ,ಸೆಪ್ಟಂಬರ್,7,2022(www.justkannada.in):  ಹೃದಯಾಘಾತದಿಂದ ನಿಧನರಾದ ಆಹಾರ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ಸಂಜೆ ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನೆರವೇರಲಿದೆ.

ಸಂಜೆ 5 ಗಂಟೆಗೆ ತಂದೆ ತಾಯಿ ಸಮಾಧಿ ಬಳಿಯೇ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಲಿದೆ. ಬೆಂಗಳೂರಿನಿಂದ ಬೆಳಗಾವಿಗೆ ಉಮೇಶ್ ಕತ್ತಿ ಅವರ ಪಾರ್ಥೀವ ಶರೀರ ಏರ್ ಲಿಫ್ಟ್ ಮಾಡಲಿದ್ದು, ನಂತರ ಸಾಂಬ್ರಾ ಏರ್ ಪೋರ್ಟ್ ನಿಂದ ಬೆಲ್ಲದ ಬಾಗೇವಾಡಿವರೆಗೆ ಸೇನಾವಾಹನದಲ್ಲಿ ಪಾರ್ಥೀವ ಶರೀರ ಮೆರವಣಿಗೆ ನಡೆಯಲಿದೆ.

ವಿಶ್ವರಾಜ ಸಕ್ಕರೆ ಕಾರ್ಖಾನೆ ಬಳಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಲಾಗಿದ್ದು ಅಭಿಮಾನಿಗಳು ಜಮಾವಣೆಯಾಗಿದ್ದಾರ ಎಂಬ ಮಾಹಿತಿ ಲಭ್ಯವಾಗಿದೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾರಿ ಭದ್ರತೆ ವಹಿಸಲಾಗಿದ್ದು,  ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿದೆ.   ಇನ್ನು ಹುಕ್ಕೇರಿ ಪಟ್ಟಣದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ.

Key words: evening- Minister -Umesh Katti- funeral-Belgaum