ಮಾತೃಶ್ರೀ ರಮಾಬಾಯಿ ಅಂಬೇಡ್ಕರ್ ದಂತ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ನ್ಯಾಯಶಾಸ್ತ್ರ ದಂತ ವಿಭಾಗ ಸ್ಥಾಪನೆ.

ಬೆಂಗಳೂರು,ಜುಲೈ, 24,2023(www.justkannada.in): ಮಾತೃಶ್ರೀ ರಮಾಬಾಯಿ ಅಂಬೇಡ್ಕರ್  ದಂತ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ನ್ಯಾಯಶಾಸ್ತ್ರ (Forensic)ಶಾಖೆಯಡಿಯಲ್ಲಿ, ವಿಶೇಷವಾಗಿ ದಂತ-ವೈದ್ಯಕೀಯ ವಿಭಾಗವನ್ನು ಸ್ಥಾಪಿಸಲಾಗಿದೆ.

ಇದು ಬೆಂಗಳೂರಿನ ಖಾಸಗಿ ಸಂಸ್ಥೆಗಳಲ್ಲಿ ಮೊದಲನೆಯದಾಗಿದ್ದು, ಈ ಕ್ಷೇತ್ರದ ಶೈಕ್ಷಣಿಕ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಪ್ರಸ್ತುತ ಸಂಸ್ಥೆ ಉತ್ತಮ ಮಾನ್ಯತೆ ಪಡೆದು ಹಲವು ಸಂಸ್ಥೆಗಳಿಗಿಂತ ಮುಂಚೂಣಿಯಲ್ಲಿದೆ. ಈ ದಂತ – ವೈದ್ಯಕೀಯ ನ್ಯಾಯಶಾಸ್ತ್ರ ಶಾಖೆಯು ಘೋರ ಅಪರಾಧಿಗಳ ತನಿಖೆ ಮತ್ತು ಇಂತಹ ಅಪರಾಧಗಳಿಗೆ ಸಂಬಂಧಿಸಿದ ಮಾನವ ಅವಶೇಷಗಳನ್ನು ಗುರುತಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ಫೋರೆನ್ಸಿಕ್  ಡೆಂಟೆಸ್ಟ್ರಿಗಾಗಿಯೇ ಮೀಸಲಾದ ವಿಭಾಗವನ್ನು ಹೊಂದಲು ಸಂಸ್ಥೆಯು ಕೈಗೊಂಡ ನಿರ್ಧಾರವು, ಕಾನೂನಿನ ಭದ್ರತೆಯಡೆಗೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ದೃಢಪಡಿಸುವೆಡೆಗೆ ಈ ಸಂಸ್ಥೆಗೆ ಉಳ್ಳ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.

ಕ್ರಿಮಿನಲ್ ತನಿಖೆಗಳಲ್ಲಿ ಫೋರೆನ್ಸಿಕ್  ಡೆಂಟೆಸ್ಟ್ರಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿಶೇಷವಾಗಿ ಸಾಂಪ್ರದಾಯಿಕ ವಿಧಾನಗಳು ಸಹಾಯಕವಾಗದಾಗ ಹಲ್ಲುಗಳು ಮತ್ತು ದವಡೆಯ ಮೂಳೆಗಳಂತಹ ಅವಶೇಷಗಳು ಕೊಳೆಯುವುದಿಲ್ಲವಾದ್ದರಿಂದ ಅಧ್ಯಯನಕ್ಕೆ ಒಳಪಡಿಸಿದಾಗ ಮೃತರಾದವರ ಬಗೆಗಿನ ಸಾಕಷ್ಟುಉಪಯುಕ್ತ ಕುರುಹುಗಳನ್ನು ನೀಡುತ್ತವೆ. ವಿಶೇಷವಾಗಿ ಅಪಘಾತಗಳು, ಸಾಮೂಹಿಕ ವಿಪತ್ತುಗಳು, ಸಾವುನೋವುಗಳು, ಇತ್ಯಾದಿ ಸಂದರ್ಭಗಳಲ್ಲಿ, ಅವಶೇಷಗಳು ಕೊಳೆತು ಗುರುತಿಸಲು ಅನ್ಯಕ್ರಮಗಳಿಂದ ಸಾಧ್ಯವೇ ಆಗದಿದ್ದಾಗ ಇದು ನೆರವಿಗೆ ಬರುತ್ತದೆ. ಫೋರೆನ್ಸಿಕ್ ದಂತ ವೈದ್ಯರು ಕಾಣೆಯಾದ ವ್ಯಕ್ತಿಗಳ ದಂತಗಳಿಗೆ ಸಂಬಂಧಿಸಿದ ದಾಖಲೆಗಳನ್ನು, ಗುರುತಿಸಲಾಗದ ಅವಶೇಷಗಳಲ್ಲಿ ದೊರೆತ ಹಲ್ಲಿನ ಲಕ್ಷಣಗಳೊಂದಿಗೆ ಹೋಲಿಸುವುದು ಸೇರಿದಂತೆ ವಿವಿಧ ತಂತ್ರಗಳನ್ನು ಬಳಸುವುದರ ಮೂಲಕ ಹಲವಾರು ಗೊಂದಲಗಳನ್ನು ಬಗೆಹರಿಸುತ್ತಾರೆ. ದಂತ ದಾಖಲೆಗಳು ಸಾಮಾನ್ಯವಾಗಿ ಕ್ಷ- ಕಿರಣಗಳು, ಛಾಯಾಚಿತ್ರಗಳು ಮತ್ತು ವ್ಯಕ್ತಿಯ ಹಲ್ಲಿನ ವೈದ್ಯಕೀಯ ಇತಿಹಾಸ, ಪುನರ್ಜೋಡನೆಗಳು ಮತ್ತು ವೈಪರೀತ್ಯಗಳಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿರುತ್ತವೆ. ಈ ಕ್ರಮವನ್ನು ಫೋರೆನ್ಸಿಕ್ ದಂತ-ಹೋಲಿಕೆ ಎಂದು ಕರೆಯಲ್ಪಟ್ಟು, ಅಧಿಕೃತ ಮಾಹಿತಿಯನ್ನು ನಿಸ್ಸಂದೇಹವಾಗಿ ನೀಡುತ್ತದೆ.

ಇದಲ್ಲದೆ, ಫೋರೆನ್ಸಿಕ್ ದಂತ ವೈದ್ಯರು ಮೃತ ಶರೀರ ಅಥವಾ ಅಪರಾಧ ನಡೆದ ಸ್ಥಳದಲ್ಲಿ ದೊರೆತ ಯಾವುದೇ ವಸ್ತುವಿನ ಮೇಲೆ ಕಚಲ್ಪಟ್ಟ ಗುರುತುಗಳಿದ್ದಲ್ಲಿ, ಅವನ್ನು ಶಂಕಿತ ಅಪರಾಧಿಯ ಹಲ್ಲುಗಳೊಂದಿಗೆ ಹೋಲಿಗೆ ಹೋಲಿಸುವ ಮೂಲಕ, ಆ ವಿವರಗಳನ್ನು ನ್ಯಾಯಾಲಯದ ವಿಚಾರಣೆಯಲ್ಲಿ ಪುರಾವೆಯಾಗಿ ಪ್ರಸ್ತುತ ಪಡಿಸಬಹುದು. ಪ್ರಸ್ತುತವಿಭಾಗದಲ್ಲಿ, ಉತ್ತೇಜಿತ ದಂತವೈದ್ಯರು ಮತ್ತು ಫೋರೆನ್ಸಿಕ್ ವೃತ್ತಿಪರರಿಗೆ ತರಬೇತಿ ಕಮ್ಮಟಗಳನ್ನು ಏರ್ಪಡಿಲಾಗುತ್ತದೆ. ನೂತನ ತಂತ್ರಸಾಧನಗಳ ಪರಿಚಯ ಮತ್ತು ಫೋರೆನ್ಸಿಕ್ ಕೆಲಸಕ್ಕೆ ಅಗತ್ಯವಾದ ಕೌಶಲ್ಯಗಳೊಂದಿಗೆ ಅವರನ್ನು ಸಜ್ಜುಗೊಳಿಸಲಾಗುತ್ತದೆ. ಹೀಗೆ ಮಾಡುವ ಮೂಲಕ, ಸಂಸ್ಥೆಯು ಈ ಕ್ಷೇತ್ರಕ್ಕೆಅವಶ್ಯಕವಾದ ಅರ್ಹತಜ್ಞರ ಸಮೂಹವನ್ನುರೂಪಿಸಿ, ನ್ಯಾಯವಿಜ್ಞಾನದ ಈವಿಶೇಷ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

ಡಾ. ದೀಪಕ್ .ಅವರು ಫೋರೆನ್ಸಿಕ್ ದಂತ ವಿಭಾಗದ ಕೋರ್ಸ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ   ಫೋರೆನ್ಸಿಕ್  ಡೆಂಟೆಸ್ಟ್ರಿ ಕ್ಷೇತ್ರದಲ್ಲಿ ಅವರ ಪರಿಣತಿಯು ಗಮನಾರ್ಹವಾಗಿದ್ದು, ಈ ಕ್ಷೇತ್ರದಲ್ಲಿಉಪಲಬ್ಧವಿರುವ ಕೆಲವೇ ತಜ್ಞರಲ್ಲಿ ಒಬ್ಬರಾಗಿರುವುದ ಅವರ ಪ್ರತ್ಯೇಕತೆ. ಇದೇ ಸಂಸ್ಥೆ ಹಳೆಯ ವಿದ್ಯಾರ್ಥಿಯಾಗಿರುವುದರಿಂದ, ಅವರು ಫೋರೆನ್ಸಿಕ್ ಒಡಾಂಟಾಲಜಿ, ಫೋರೆನ್ಸಿಕ್ ಆಂಥ್ರೊಪಾಲಜಿ, , ವಯೋಮಾಪನ, ವ್ಯಕ್ತಿಪರೀಶೀಲನೆ ಮತ್ತುವಿಪತ್ತು ಸಂತ್ರಸ್ತರ ಗುರುತಿಸುವಿಕೆ,  ಮೊದಲಾದಕ್ಷೇತ್ರಗಳಲ್ಲಿ ದೃಢವಾದಹಿಡಿತವನ್ನುಹೊಂದಿದ್ದಾರೆ. ಡಾ. ದೀಪಕ್ ಅವರು ವೈದ್ಯಕೀಯ ನ್ಯಾಯಪ್ರಕರಣಗಳನ್ನು ಪರಿಹರಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದಲ್ಲದೆ, ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಕೇಂದ್ರಗಳಲ್ಲಿ ತರಬೇತಿ ನೀಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ವೈದ್ಯಕೀಯ ನ್ಯಾಯಶಾಸ್ತ್ರದ ಪ್ರಗತಿಗೆ ಅವರ ಕೊಡುಗೆ ಅಸಾಧಾರಣವೆನ್ನಬಹುದು.

ಮಾತೃಶ್ರೀ ರಮಾಬಾಯಿ ಅಂಬೇಡ್ಕರ್ ದಂತ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ನ್ಯಾಯಶಾಸ್ತ್ರ ದಂತ ವಿಭಾಗವನ್ನು ಸ್ಥಾಪಿಸುವ ಮೂಲಕ ನ್ಯಾಯಾನ್ವೇಷಣೆಯಲ್ಲಿ ಫೋರೆನ್ಸಿಕ್ ಅಡಾಂಟಾಲಜಿಯ ಪ್ರಾಮುಖ್ಯತೆಯನ್ನು ದೃಢೀಕರಿಸುತ್ತದೆ. ಸಂತಪ್ತ ಕುಟುಂಬಗಳಿಗೆ ಸಾಂತ್ವನವನ್ನುನೀಡುತ್ತದೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಈ ಇಲಾಖೆಯು ಈಗಿನ ಕಾನೂನು ಜಾರಿಸಂಸ್ಥೆಗಳು, ಪೊಲೀಸ್ ವಿಭಾಗ, ವೈದ್ಯಕೀಯನ್ಯಾಯಶಾಸ್ತ್ರ ಪ್ರಯೋಗಾಲಯಗಳು ಮತ್ತು ವೈದ್ಯಕೀಯ ನ್ಯಾಯಶಾಸ್ತ್ರ ಔಷಧ ಇಲಾಖೆಗಳಿಗೆ ಅಮೂಲ್ಯವಾದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ, ಪರಿಣಾಮಕಾರಿಯಾಗದ ನ್ಯಾಯವನ್ನು ನೀಡಲು ಅಧಿಕಾರ ನೀಡುತ್ತದೆ.

Key words: Establishment – Medical -Forensic -Dentistry – Department – Matrusree- Ramabai Ambedkar- Dental College.