ಮೆಟ್ರೋ ಸುರಂಗ ಕೊರೆದು 13 ತಿಂಗಳ ಬಳಿಕ ಹೊರ ಬಂದ ಊರ್ಜಾ ಯಂತ್ರ:  ಸಿಎಂ ಬೊಮ್ಮಾಯಿ ಅವರಿಂದ ವೀಕ್ಷಣೆ.

ಬೆಂಗಳೂರು,ಸೆಪ್ಟಂಬರ್,22,2021(www.justkannada.in):  ಬೆಂಗಳೂರಿನ ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದ್ದು,  ಮೆಟ್ರೋ ಸುರಂಗ ಕೊರೆದು ಸುಮಾರು 13 ತಿಂಗಳ ಬಳಿಕ  ಊರ್ಜಾ ಯಂತ್ರ ಹೊರಬಂದಿದೆ.

ಬೆಂಗಳೂರಿನ ಶಿವಾಜಿನಗರದಲ್ಲಿ  855 ಮೀಟರ್ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, 2020ರ ಆಗಸ್ಟ್​ನಲ್ಲಿ ಊರ್ಜಾ ಯಂತ್ರ ಸುರಂಗ ಪ್ರವೇಶಿಸಿತ್ತು. ಇದೀಗ 13 ತಿಂಗಳ ಬಳಿಕ ಇಂದು  ಊರ್ಜಾ ಯಂತ್ರ ಹೊರಬಂದಿದೆ. ಯಂತ್ರ ಹೊರಬರುವ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದು, ಊರ್ಜಾ ಬ್ರೇಕ್ ಥ್ರೂ ವೀಕ್ಷಿಸಿದರು.

ಕಂಟೋನ್ಮೆಂಟ್​ನಿಂದ ಶಿವಾಜಿನಗರ ಮಾರ್ಗವಾಗಿ ಸುರಂಗ ಕೊರೆಯಲಾಗಿದ್ದು,  855 ಮೀಟರ್ ಸುರಂಗ ಕೊರೆದು ಟಿಬಿಎಂ ಹೊರ ಬಂದಿದೆ. ಮೆಟ್ರೋ 2ನೇ ಹಂತದಲ್ಲಿ ಗೊಟ್ಟಿಗೆರೆಯಿಂದ ನಾಗಾವರವರೆಗೆ 21 ಕಿ.ಮೀ ಉದ್ದ ಮೆಟ್ರೋ ಕಾಮಗಾರಿ ನಡೆಯುತ್ತಿದೆ.

Key words:  Energy Machine-came out- 13 months- after -Metro -Tunnel

ENGLISH SUMMARY…

CM Bommai watches power machine coming out of the metro tunnel after 13 months:
Bengaluru, September 22, 2021 (www.justkannada.in): The Metro train works are going on in Shivajinagar, Bengaluru, where the power machine came out of the metro tunnel after nearly 13 months.
A tunnel measuring 855 radii is being carved at Shivajinagar in Bengaluru as part of the Metro train project work. The power machine entered the tunnel in August 2020, which emerged out of the tunnel today, after 13 months. Chief Minister Basavaraj Bommai was present today to watch the ‘Urja breakthrough’ (power machine coming out of the tunnel).
A tunnel is being carved as part of the metro train route from Cantonment to Shivajinagar. The tunnel is 855 m. long. The 2nd phase of the metro works, which is 21 km long from Gottigere to Nagawara is going on.
Keywords: Metro works/ Chief Minister Basavaraj Bommai/watches/ Urja Breakthrough/ tunnel/ power machine/ emerges/ comes out