ಆಟೋ ಮೇಲೆ ಕಾಡಾನೆ ದಾಳಿ: ಪ್ರಯಾಣಿಕನಿಗೆ ಗಂಭೀರ ಗಾಯ

ಕೊಡಗು,ಆಗಸ್ಟ್,9,2025 (www.justkannada.in):  ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಚಲಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ  ನಡೆಸಿದ ಪರಿಣಾಮ ಪ್ರಯಾಣಿಕನಿಗೆ  ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.

ವಿರಾಜಪೇಟೆ ತಾಲೂಕಿನ ಅಮ್ಮತ್ತಿ  ಸಮೀಪ ಇಂಜಿಲಗೆರೆ ಬಳಿ ಈ  ಘಟನೆ ನಡೆದಿದೆ. ಕಾಡಾನೆ  ದಾಳಿಯಿಂದ ಗಾಯಗೊಂಡ ಇಂಜಿಲಗೆರೆಯ ನಿವಾಸಿ ಪ್ರದೀಪ್ ಅವರನ್ನ  ಸಿದ್ದಾಪುರ ಆಸ್ಪತ್ರೆಗೆ ದಾಖಲು  ಮಾಡಲಾಗಿದೆ. ಘಟನೆಯಲ್ಲಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಬೆಳ್ಳಂಬೆಳಗ್ಗೆ ಕಾಡಾನೆ ಕಾಫಿ ತೋಟದಿಂದ ರಸ್ತೆಗೆ ಬಂದು ಆಟೋ ಮೇಲೆ ದಾಳಿ ಮಾಡಿದ್ದು, ಆಸ್ಪತ್ರೆಗೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಗಾಯಗೊಂಡ ಪ್ರದೀಪ್ ಗೆ  ಚಿಕಿತ್ಸೆ ಕೊಡಿಸಲು ಸಹಾಯ ಮಾಡಿದ್ದಾರೆ.

ದಾಳಿ‌ ಮಾಡಿದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ  ನೀಡಿದ್ದು, ಆನೆಯನ್ನು ಕಾಡಿಗಟ್ಟುವ ಕಾರ್ಯಚರಣೆ ನಡೆಸಲಾಗುತ್ತಿದೆ.  ಕಾಡಾನೆ ಹಾವಳಿ ತಡೆಗಟ್ಟಲು ಸ್ಥಳೀಯರು ಒತ್ತಾಯಿಸಿದ್ದಾರೆ.

Key words: elephant, attacks, auto, passenger, seriously, injured