ಕಾಡಾನೆ ದಾಳಿಗೆ ಸ್ಥಳದಲ್ಲೇ ಅಕ್ಕ ಸಾವು: ತಂಗಿಗೆ ಗಂಭೀರ ಗಾಯ.

ರಾಮನಗರ,ಜೂನ್,19,2023(www.justkannada.in):  ಜಮೀನಿಗೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಅಕ್ಕ ಸ್ಥಳದಲ್ಲೇ ಸಾವನ್ನಪ್ಪಿ ತಂಗಿಗೆ ಗಂಭೀರ  ಗಾಯಗಳಾಗಿರುವ ಘಟನೆ ಕನಕಪುರದಲ್ಲಿ ನಡೆದಿದೆ.

ಕನಕಪುರ ತಾಲ್ಲೂಕಿನ ಅಚ್ಚಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಯಮ್ಮ ಸಾವನ್ನಪ್ಪಿದ ಮಹಿಳೆ.  ತಂಗಿ ವೆಂಕಟಲಕ್ಷ್ಮಮ್ಮಗೆ ಗಂಭೀರ ಗಾಯಗಳಾಗಿದ್ದು ಕನಕಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಮೀನು ಕೆಲಸಕ್ಕೆ ಸಹೋದರಿಯರಿಬ್ಬರು ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Elephant-attack- women-died- on the spot