ಈ ಬಾರಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಕಾಂಗ್ರೆಸ್ ಬಾವುಟ ಹಾರುತ್ತದೆ-ಸಚಿವ ಸಂತೋಷ್ ಲಾಡ್.

ಹುಬ್ಬಳ್ಳಿ,ಜೂನ್,19,2023(www.justkannada.in): ಈ ಬಾರಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಕಾಂಗ್ರೆಸ್ ಬಾವುಟ ಹಾರುತ್ತದೆ ಎಂದು ಸಚಿವ ಸಂತೋಷ್ ಲಾಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್ ಲಾಡ್,  ಹುಬ್ಬಳ್ಳಿ-ಧಾರವಾಢ ಪಾಲಿಕೆಯ  ಬಹಳಷ್ಟು ಸದಸ್ಯರು ನಮ್ಮ ಕಡೆ ಒಲವು ತೋರಿಸಿದ್ದಾರೆ. ಪಾಲಿಕೆ ಮೇಯರ್ ಚುನಾವಣೆ ಏನಾಗುತ್ತೆ ಎಂದು ಗೊತ್ತಿಲ್ಲ. ಪಕ್ಷೇತರರು ಬಿಜೆಪಿ  ಕೆಲ ಸದಸ್ಯರಿಗೆ ಅಸಮಾಧಾನವಿದೆ. ಪಕ್ಷೇತರರು, ಬಿಜೆಪಿಯ ಕೆಲ ಸದಸ್ಯರು ಕಾಂಗ್ರೆಸ್ ಸೇರಲು ಮಾಜಿ ಸಿಎಂ ಜಗದೀಶ್  ಶೆಟ್ಟರ್, ವಿನಯ್  ಕುಲಕರ್ಣಿ ಜೊತೆ ಮಾತನಾಡುತ್ತಿದ್ದಾರೆ ಎಂದರು.

ರಾಜ್ಯಾದ್ಯಂತ ವಿದ್ಯುತ್ ದರ ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ಪ್ರತಿ ಬಾರಿಯಂತೆ ವಿದ್ಯುತ್ ದರ ಏರಿಕೆಯಾಗಿದೆ. ವಿದ್ಯುತ್ ದರ ಏರಿಕೆ ಬಗ್ಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.

Key words: Congress flag – Hubli-Dharwad –corporation-Minister -Santosh Lad.