Sunday, September 20, 2026

BDA Apartments

ಕಾಡಾನೆ ದಾಳಿ: ಅರವಳಿಕೆ ತಜ್ಞ ಸಾವು BDA JK_Adv BDA Adv
Home Crime ಕಾಡಾನೆ ದಾಳಿ: ಅರವಳಿಕೆ ತಜ್ಞ ಸಾವು.

ಕಾಡಾನೆ ದಾಳಿ: ಅರವಳಿಕೆ ತಜ್ಞ ಸಾವು.

ಹಾಸನ, ಆಗಸ್ಟ್,31,2023(www.justkannada.in)   ಚಿಕಿತ್ಸೆ ನೀಡಲು ಬಂದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿ ಅರವಳಿಕೆ ತಜ್ಞ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ವೈದ್ಯನ ಜೊತೆ ಹೋದ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ಭೀಮ ದಾಳಿ ನಡೆಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಬಳಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿ ವೆಂಕಟೇಶ್, ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಆನೆಗೆ ಚಿಕಿತ್ಸೆ ನೀಡುವ ಮುನ್ನ ಅರವಳಿಕೆ ಚುಚ್ಚುಮದ್ದು ನೀಡುವಾಗ ಈ ಘಟನೆ ಸಂಭವಿಸಿದೆ. ಗಾಯಗೊಂಡ ಭೀಮನನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ಹಳ್ಳಿಯೂರು ಬಳಿ ವೆಂಕಟೇಶ್ ಅವರು ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಈ ವೇಳೆ ಏಕಾಏಕಿಯಾಗಿ ವೆಂಕಟೇಶ್ ಮೇಲೆ ಭೀಮ ಆನೆ ದಾಳಿ ಮಾಡಿದೆ.ಕಾಡಾನೆ ದಾಳಿ elephant elephant 2

ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಹಿಂದೆ ಆನೆ ಸೆರೆ ವೇಳೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದ ಅನುಭವವನ್ನು ವೆಂಕಟೇಶ್ ಹೊಂದಿದ್ದರು.

Key words: Elephant -attack -g anesthetic- injection- Staff –death-Hassan