ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವು…

ಮೈಸೂರು,ಅಕ್ಟೋಬರ್,20,2020(www.justkannada.in): ಟಿಂಕರಿಂಗ್ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು-ಬನ್ನೂರು ರಸ್ತೆಯ ಹೊಸಹುಂಡಿ ಬಳಿ ಈ ಘಟನೆ ನಡೆದಿದೆ. ಸೈಯದ್ ಮುಕ್ತಾರ್ (48) ಮೃತಪಟ್ಟವರು. ಸೈಯದ್ ಮುಕ್ತಾರ್ ಮೈಸೂರಿನ ಕೆ.ಸಿ.ನಗರದ ನಿವಾಸಿಯಾಗಿದ್ದು,  ಆಟೋ ಗ್ಯಾರೇಜ್ ಒಂದರಲ್ಲಿ ಟಿಂಕರಿಂಗ್ ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.electric-shock-working-person-death-mysore

ವೆಲ್ಡಿಂಗ್ ಕೆಲಸ ನಡೆಯುತ್ತಿದ್ದ ವೇಳೆ ವಿದ್ಯುತ್ ತಗುಲಿ ಸೈಯದ್ ಮುಕ್ತಾರ್ ಮೃತಪಟ್ಟಿದ್ದಾರೆ. ಈ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: electric shock- working- person- death- mysore