ಅಪಾಯಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿ: ಗ್ರಾಮಗಳು ಜಲಾವೃತ: ಬೆಳೆ ಹಾನಿ…

ಕಲಬುರುಗಿ,ಅಕ್ಟೋಬರ್,20,2020(www.justkannada.in):  ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಭೀಮಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಗ್ರಾಮಗಳು ಜಲಾವೃತವಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆjk-logo-justkannada-logo.

ಭೀಮಾನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಕಲಬುರುಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಕಡಬೂರು ಗ್ರಾಮ ಜಲಾವೃತವಾಗಿದ್ದು ಜನರು ಕಂಗಾಲಾಗಿದ್ದಾರೆ. ಈ ನಡುವೆ ಗ್ರಾಮವನ್ನ ಬೇರೆಡೆಗೆ ಶಿಫ್ಸ್ ಮಾಡುವಂತೆ ಆಗ್ರಹಿಸಿದ್ದಾರೆ. ಭೀಮಾ ನದಿ ಪಾತ್ರದಲ್ಲಿ ಹೊಲಗಳಲ್ಲಿ ಸುಮಾರು 10ಅಡಿ ನೀರು ನಿಂತಿದ್ದು ಬೆಳೆಗಳಿಗೆ ಹಾನಿಯಾಗಿದೆ.

ಹಾಗೆಯೇ ಕಲ್ಬುರ್ಗಿ ಜಿಲ್ಲೆಯ ಹಾಗರಗುಂಡಗಿ  ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಇಬ್ಬರನ್ನ ರಕ್ಷಿಸಲಾಗಿದ್ದು ಬೇರೆಡೆಗೆ ಅವರನ್ನ ಸ್ಥಳಾಂತರಿಸಲಾಗಿದೆ.  ಕಲಬುರುಗಿ, ಯಾದಗಿರಿ, ವಿಜಯಪುರ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಜನರು ಕಂಗಾಲಾಗಿದ್ದಾರೆ.

Key words: bhima river-flood-villager-crop