ಕಾಡಾನೆ ಸಾವು: ಜಮೀನು ಮಾಲೀಕನ ವಿರುದ್ದ ಪ್ರಕರಣ ದಾಖಲು….

ಮೈಸೂರು,ಮಾ,3,2020(www.justkannada.in):  ಜೋಳ ಮೇಯಲು ಬಂದ ವೇಳೆ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವನ್ನಪ್ಪಿರುವ ಘಟನೆ ಹನೂರು ಭಫರ್ ರೇಂಜ್ ನ ಬಿ.ಎಂ ಹಳ್ಳಿ ಬಳಿ ನಡೆದಿದೆ.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಭಫರ್ ರೇಂಜ್ ನ ಬಿ.ಎಂ ಹಳ್ಳಿ ಗ್ರಾಮದ ಚಿಕ್ಕಮಲ್ಲಯ್ಯ ಎಂಬುವವರ ಜಮೀನಿನಲ್ಲಿ ಕಾಡಾನೆ ಸಾವನ್ನಪ್ಪಿದೆ. ಜೋಳ ಮೇಯಲು ಬಂದ ವೇಳೆ ಈ ಘಟನೆ ಸಂಭವಿಸಿದೆ. ಜಮೀನು ಮಾಲೀಕ ಚಿಕ್ಕಮಲ್ಲಯ್ಯ ಅಕ್ರಮವಾಗಿ ಜಮೀನಿಗೆ ವಿದ್ಯುತ್ ಬೇಲಿ ಹಾಕಿದ್ದರು ಎನ್ನಲಾಗಿದೆ.

ಮೃತಪಟ್ಟ ಆನೆ 20-25 ವರ್ಷದ ಗಂಡಾನೆ  ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿ ಏಡುಕುಂಡಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಮೀನು ಮಾಲಿಕ ಚನ್ನಮಲ್ಲಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

Key words: Electric –shock elephant –dies- case -against – land owner-mysore