ಮಾರ್ಚ್ 13ರಿಂದ ಮೂರು ದಿನಗಳ ಕಾಲ ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲೆ ಉತ್ಸವ ಮತ್ತು ವಿಚಾರ ಸಂಕಿರಣ…

ಮೈಸೂರು,ಮಾ,3,2020(www.justkannada.in): ಮಾರ್ಚ್ 13ರಿಂದ ಮೂರು ದಿನಗಳ ಕಾಲ ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲೆ ಉತ್ಸವ ಮತ್ತು ವಿಚಾರ ಸಂಕಿರಣವನ್ನ ಆಯೋಜಿಸಲಾಗಿದೆ.

ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತು – ಕರ್ನಾಟಕ ಸಾಹಸ ಕಲಾ ಅಕಾಡೆಮಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ , ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯ , ಗೊಟಗೋಡಿ , ಹಾವೇರಿ ಜಿಲ್ಲೆ | ಬುಡಕಟ್ಟು ಸಚಿವಾಲಯ ಇವರ ಸಂಯುಕ್ತಾಶ್ರಯದಲ್ಲಿ , ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲೆ ಉತ್ಸವ ಮತ್ತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

ಈ ಕುರಿತು ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ  ಮೈಸೂರು ಉತ್ಸವ ಸಂಚಾಲಕ ಡಾ. ಕೆ ವಸಂತ ಕುಮಾರ್, ಮಾರ್ಚ್ 13 , 14 , 15 ರಂದು ಅನಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಉತ್ಸವ ಮತ್ತು ವಿಚಾರ ಸಂಕಿರಣ ನಡೆಯಲಿದೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆಯೋಜನೆ ಮಾಡಲಾಗಿದೆ. ಉತ್ಸವದಲ್ಲಿ ದೇಶದ 18 ರಾಜ್ಯಗಳಿಂದ ಸುಮಾರು 300ಕ್ಕೂ ಹೆಚ್ಚು ಕಲಾವಿದರು , 60ಕ್ಕೂ ಹೆಚ್ಚು ವಿಷಯ ತಜ್ಞರು ವಿಚಾರಗಳನ್ನು ಮಂಡಿಸಲಿದ್ದಾರೆ. ಮುಂದಿನ ತಲೆಮಾರಿಗೆ ಜಾನಪದ ಮತ್ತು ಬುಡಕಟ್ಟು ಕಲೆಗಳನ್ನು ಪರಿಚಯಿಸಿ ಸಂರಕ್ಷಿಸಿ , ಸಂವರ್ಧಿಸುವ ಉದ್ದೇಶವನ್ನು ಈ ಉತ್ಸವ  ಹೊಂದಿದೆ .ಹಲವಾರು ಸಂಘಟನೆಗಳು ಈ ಉತ್ಸವಕ್ಕೆ ಕೈಜೋಡಿಸಲಿವೆ ಎಂದು ತಿಳಿಸಿದರು.

Key words: All India Folk and Tribal Art – Seminar -three days – March 13-mysore