ಚುನಾವಣೆ ಗೆಲುವು ಸಂಪುಟ ವಿಸ್ತರಣೆಗೆ ಸಂಬಂಧ ಇಲ್ಲ- ಸಚಿವ ಗೋವಿಂದ ಕಾರಜೋಳ.

ಬೆಂಗಳೂರು,ಮಾರ್ಚ್,11,2022(www.justkannada.in):  ಪಂಚರಾಜ್ಯಗಳ ಚುನಾವಣೆ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ಇದೀಗ ಕರ್ನಾಟಕ  ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ಕುರಿತು ಮಾತನಾಡಿರುವ ಸಚಿವ ಗೋವಿಂದ ಕಾರಜೋಳ, ಚುನಾವಣೆ ಗೆಲುವು ಸಂಪುಟ ವಿಸ್ತರಣೆಗೆ ಸಂಬಂಧ ಇಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಪಂಚರಾಜ್ಯಗಳಲ್ಲಿ ಚುನಾವಣೆ ಗೆಲುವು ಸಂಪುಟ ವಿಸ್ತರಣೆಗೆ ಸಂಬಂಧ ಇಲ್ಲ. ಸಂಪುಟ ವಿಸ್ತರಣೆ  ಬಗ್ಗೆ ಸಿಎಂ ಹೈಕಮಾಂಡ್ ನಿರ್ಧರಿಸುತ್ತಾರೆ ಎಂದರು.

ದೇಶದಲ್ಲಿ ಕಾಂಗ್ರೆಸ್ ದಿನೇ ದಿನೇ ಕುಸಿಯುತ್ತಿದೆ.  ಪ್ರಧಾನಿ ಮೋದಿ ಜನರ ನಾಡಿ ಮಿಡಿತ ಅರಿತಿದ್ದಾರೆ.  ಈ ಫಲಿತಾಂಶ ಕೇವಲ ಐದು ರಾಜ್ಯಗಳ ಜನರ ತೀರ್ಮಾನ ಅಲ್ಲ. ಇಡೀ ದೇಶದ ಜನರ ಮನಸ್ಥಿತಿ ತಿಳಿಸುತ್ತದೆ. ಹೀಗಾಗಿ ಬಿಜೆಪಿಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಸಚಿವ ಗೋವಿಂದ ಕಾರಜೋಳ ಸಂತಸ ವ್ಯಕ್ತಪಡಿಸಿದರು.

Key words: election-victory – Minister-Govinda Karajola.